ಅಪ್ತಾಪ್ತೆಯನ್ನು ಪ್ರೀತಿಸಿ ಮದುವೆಯಾಗಿ.. ಮೂರು ವರ್ಷಗಳ ನಂತರ ಪಾಪಿ ಗಂಡ ಮಾಡಿದ ಕೆಲಸ ಅಬ್ಬಾ...

Crime Logo
Published on

ಕನಕಪುರ: ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾಗಿ, ಮೂರು ವರ್ಷಗಳ ನಂತರ ಆಕೆಯ ನಡತೆ ಮೇಲೆ ಅನುಮಾನಗೊಂಡು ಪತಿಯೇ ಕೊಲೆ ಮಾಡಿರುವ ಘಟನೆ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಮುದವಾಡಿಯಲ್ಲಿ ನಡೆದಿದ್ದು, ಆರೋಪಿ ಪತಿಯನ್ನು ಬಂಧಿಸಲಾಗಿದೆ.

ನಾಗಮಂಗಲ ಮೂಲದ ನರಸಮ್ಮ (16) ಎಂಬಾಕೆ ಮೃತಪಟ್ಟ ದುರ್ದೈವಿ ಆದರೆ, ಶಿವು ಕೊಲೆ ಮಾಡಿದ ಪಾಪಿ ಗಂಡ.

ನರಸಮ್ಮಗೆ ಮದುವೆ ಆದಾಗ 13 ವರ್ಷಗಳು ಇವರಿಗೆ ಒಂದು ಮಗುವೂ ಇದೆ. ಕಳೆದ ಗುರುವಾರ ತನ್ನ ಪತ್ನಿಯು ಇದ್ದಕ್ಕಿದ್ದ ಹಾಗೆ ಆರೋಗ್ಯ ತಪ್ಪಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಸಾನಪ್ಪಿದ್ದಳು ಎಂದು ನಂಬಿಸಿದ್ದ.

ಅಪ್ತಾಪ್ತ ಬಾಲಕಿಯನ್ನು ವಿವಾಹವಾಗಿದ್ದ ಕಾರಣಕ್ಕಾಗಿ ಆರೋಪಿ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಶುಕ್ರವಾರ ವಶಕ್ಕೆ ಪಡೆದಿದ್ದರು.

ಪತ್ನಿಯು ಇದ್ದಕ್ಕಿದ್ದ ಆಗೆ ಆರೋಗ್ಯ ತಪ್ಪಿ ಸಾವನಪ್ಪಿದ್ದಾಳೆ ಎಂದು ಸಾರ್ವಜನಿಕರು ಮತ್ತು ಆಸ್ಪತ್ರೆ ಸಿಬ್ಬಂದಿಗೆ ನಂಬಿಸಿದ್ದ. ವೈದ್ಯರು ಮರಣೋತ್ತರ ಪರೀಕ್ಷೆಯನ್ನು ಶುಕ್ರವಾರ ನಡೆಸಿ ಕುಟುಂಬದವರಿಗೆ ಮೃತದೇಹವನ್ನು ನೀಡಿದ್ದರು. ಪೋಕ್ಸೋ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ತನ್ನ ಪತ್ನಿಯ ನಡತೆ ಮೇಲೆ ಅನುಮಾನಗೊಂಡು ಗುರುವಾರ ಸಂಜೆ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಪತ್ನಿಯ ಕತ್ತುಹಿಸುಕಿ ಸಾಯಿಸಿದೆ.

ನಂತರದಲ್ಲಿ ಯಾರಿಗೂ ತಿಳಿಸದೆ ಸುಮ್ಮನಿದ್ದು ಶುಕ್ರವಾರ ಬೆಳಿಗ್ಗೆ ಆರೋಗ್ಯ ತಪ್ಪಿದ್ದಾಳೇ ಎಂದು ಸುಳ್ಳು ಹೇಳಿ ದಯಾನಂದ ಸಾಗರ್ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಿದಾಗ ವೈದ್ಯರು ಸಾವನಪ್ಪಿರುವುದಾಗಿ ತಿಳಿಸಿದರು.

ಮೃತ ದೇಹವನ್ನು ವಾಪಸ್ ಮನೆಗೆ ತೆಗೆದುಕೊಂಡು ಹೋಗಬೇಕು ಎಂದು ಆರೋಪಿ ಶಿವು ಕೇಳಿದಾಗ ಇದಕ್ಕೆ ವೈದ್ಯರು ನಿರಾಕರಿಸಿದ್ದರು. ನಂತರ ಪೊಲೀಸರಿಗೆ ಮಾಹಿತಿ ದೊರೆತು ಪ್ರಕರಣ ದಾಖಲಾಯಿತು.

ಮರಣೋತ್ತರ ಪರೀಕ್ಷೆ ನಂತರ ಮೃತ ದೇಹವನ್ನು ಪಡೆದ ಮೃತರ ಕುಟುಂಬದವರು ಶುಕ್ರವಾರ ಸಂಜೆ ಕನಕಪುರ ದೇಗುಲಮಠದಲ್ಲಿ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾರೆ. ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ವಿರುದ್ದ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು ಶನಿವಾರ ಸಂಜೆ ನ್ಯಾಯಾಧೀಶರ ಮುಂದೆ ಹಾಜರು ಪಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net