ಅಡುಗೆ ವಿಚಾರದಲ್ಲಿ ಜಗಳ ಪತ್ನಿ ಕೊಂದ ಪತಿ

Crime Logo
Published on

ಮಾಗಡಿ : ಅಡುಗೆ ಮಾಡುವ ವಿಚಾರಕ್ಕೆ ಪತಿ ಹಾಗೂ ಪತ್ನಿಯ ನಡುವೆ ನಡೆದ ಜಗಳ ಪತ್ನಿ ಹತ್ಯೆಯಲ್ಲಿ ಅಂತ್ಯ ಕಂಡಿದೆ.


ತಾಲೂಕಿನ ಮತ್ತಿಕೆರೆ ಗ್ರಾಮದ ತಿಮ್ಮಮ್ಮ [65] ಕೋಲೆಯಾದ ಮಹಿಳೆಯಾಗಿದ್ದು , ರಂಗಯ್ಯ ಕೊಲೆ ಮಾಡಿದ ಗಂಡ.

ಗುರುವಾರ ಬೆಳಗ್ಗೆ ಅಡುಗೆ ಮಾಡುವ ವಿಚಾರದಲ್ಲಿ ಪತ್ನಿ ತಿಮ್ಮಮ್ಮ ಹಾಗೂ ಪತಿ ರಂಗಯ್ಯ ನಡುವೆ ಗಲಾಟೆ ನಡೆದಿದೆ . ಈ ವೇಳೆ ಪತಿ ರಂಗಯ್ಯ ತನ್ನ ಪತ್ನಿ ತಿಮ್ಮಮ್ಮ ಅವರಿಗೆ ತುರೆಮಣೆಯಿಂದ ಹೊಡೆದಿದ್ದಾನೆ. ಈ ವೇಳೆ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಪತ್ನಿಯನ್ನು ಭೀಕರವಾಗಿ ಹತ್ಯೆ ನಡೆಸಿ ತಿರುಪತಿಗೆ ಎಸ್ಕೇಪ್ ಆಗಲು ಮುಂದಾದ ಆರೋಪಿ ರಂಗಯ್ಯನನ್ನು ರಾಮನಗರದಲ್ಲಿ ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಮಾಗಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net