

ದಾವಣಗೆರೆ: ಪತ್ನಿಯ ಶೀಲದ ಕುರಿತು ಅನುಮಾನ ಹೊಂದಿದ್ದ ಪತಿ, ಆಕೆ ಬಹಿರ್ದೆಸೆಗೆಂದು ಹೋಗಿದ್ದಾಗ ಕೊಲೆ ಮಾಡಿದ್ದಾನೆ. ಆದರೆ ಕೊಲೆ ಮಾಡಿದ ಮೂರೇ ಗಂಟೆಗಳಲ್ಲಿ ಪೊಲೀಸರು ಆರೋಪಿ ಪತಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಚೀಲಾಪುರ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಚೀಲಾಪುರ ಗ್ರಾಮ ನಿವಾಸಿ ರಮೀಜಾಬೀ (45) ಕೊಲೆಯಾದ ಗೃಹಿಣಿ. ಪತಿ ಷಫೀವುಲ್ಲಾ (50) ಕೊಲೆ ಆರೋಪಿ.
ಷಫೀವುಲ್ಲಾ-ರಮೀಜಾಬೀ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಪತ್ನಿಯ ಶೀಲದ ಬಗ್ಗೆ ಶಂಕೆಯಿಂದ ಪತ್ನಿ ಜತೆ ಜಗಳವಾಡುತ್ತಿದ್ದ ಪತಿ, ಇಂದು ಬೆಳಗ್ಗೆ ಆಕೆ ಮನೆ ಸಮೀಪದ ಜಮೀನಿಗೆ ಬಹಿರ್ದೆಸೆಗೆ ತೆರಳಿದ್ದಾಗ ಹಿಂಬಾಲಿಸಿದ್ದಾನೆ. ಅಲ್ಲಿ ಆಕೆಯನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದ.
ಇದನ್ನೂ ಓದಿ: #MarriageStrike : ಮದುವೆ ವಿರುದ್ಧ ಪುರುಷರ ಅಭಿಯಾನ!
ಈ ಬಗ್ಗೆ ಪುತ್ರ ಅತಾವುಲ್ಲಾ ಪೊಲೀಸರಿಗೆ ದೂರು ನೀಡಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಹೊನ್ನಾಳಿ ಪೊಲೀಸರು, ಘಟನೆ ನಡೆದ ಮೂರೇ ಗಂಟೆಯೊಳಗೆ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.