

ರಾಮನಗರ: ಕೋರ್ಟ್ ನಲ್ಲಿ ವಿಚ್ಚೇಧನ ಅರ್ಜಿ ವಿಚಾರಣೆ ಹಂತದಲ್ಲಿರುವಾಗಲೇ ವ್ಯಕ್ತಿಯನ್ನು ತನ್ನ ಪತ್ನಿಯನ್ನು ಹಾಡಹಗಲೇ ಕೊಲೆ ಮಾಡಿರುವ ಘಟನೆ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಮುದವಾಡಿ ಬಳಿ ನಡೆದಿದೆ.
ಪಿಚ್ಚನಕೆರೆಯ ಮಂಜುಳಾ ಪತಿಯಿಂದಲೇ ಕೊಲೆಯಾದ ನತದೃಷ್ಠ ಮಹಿಳೆ. ಇವರನ್ನು ರಾಮನಗರ ತಾಲೂಕಿನ ವಡ್ಡರಹಳ್ಳಿಯ ರಾಜೇಶ್ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. ಇಬ್ಬರ ನಡುವೆ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ವಿಚ್ಚೇದಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ಅಂತಿಮ ಹಂತಕ್ಕೆ ಬಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ತೀರ್ಪು ಸಹ ಹೊರ ಬರುವುದರಲ್ಲಿ ಇತ್ತು.
ಇದರ ನಡುವೆಯೇ ಚಿಕ್ಕಮುದವಾಡಿ ಬಳಿ ಬಸ್ ಗಾಗಿ ಕಾಯುತ್ತಿದ್ದ ಕುಳಿತಿದ್ದ ಮಂಜುಳಾ ಅವರ ಮೇಲೆ ಎರಗಿದ ರಾಜೇಶ್ ಮಾರಾಕಾಸ್ತ್ರದಿಂದ ತಲೆಗೆ ಬಲವಾಗಿ ಹೊಡೆದಿದ್ದು, ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಂತರ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.