ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

suicide
Published on

ಬೆಂಗಳೂರು: ಅನಿಲ್..​ ಅನಿಲ್​.. ಓಪನ್​ ದ ಡೋರ್​, ಅನಿಲ್..​ ಅನಿಲ್..​ ಇಲ್ನೋಡು ನಾವೆಲ್ಲ ಇದ್ದೇವೆ.. ಪ್ಲೀಸ್ ಬಾಗಿಲು ತೆಗಿ... ಅನಿಲ್​ ಸಾಯಬೇಡ, ಪ್ಲೀಸ್​ ಬಾಗಿಲು ತೆಗಿ... ಎನ್ನುತ್ತ ಅಕ್ಕಪಕ್ಕದ ಮನೆಯವರು ಕಿಟಕಿ-ಬಾಗಿಲನ್ನು ಜೋರಾಗಿ ಬಡಿಯುತ್ತ ಗೋಗರೆಯುತ್ತಲೇ ಇದ್ದರು. ಇದ್ಯಾವುದಕ್ಕೂ ಕಿವಿಗೊಡದ ಆತ ನೋಡನೋಡುತ್ತಿದ್ದಂತೆ ಪ್ಯಾನಿಗೆ ಹಗ್ಗ ಹಾಕಿ ನೇಣುಬಿಗಿದುಕೊಂಡು ಪ್ರಾಣ ಬಿಟ್ಟ.

ಇಂತಹ ದುರ್ಘಟನೆ ಬಸವೇಶ್ವರ ನಗರದ ಮಂಜುನಾಥ ನಗರದಲ್ಲಿ ನಡೆದಿದ್ದು, ಆತ್ಮಹತ್ಯೆಯ ಲೈವ್ ವಿಡಿಯೋ ಲಭ್ಯವಾಗಿದೆ. ಇದನ್ನೂ ಓದಿರಿ ತಂದೆ-ತಾಯಿ-ಮಕ್ಕಳಿಬ್ಬರು ಆತ್ಮಹತ್ಯೆ, ಶವಗಳನ್ನ ಕಂಡು ಬೆಚ್ಚಿಬಿದ್ದ ಸ್ಥಳೀಯರು

28 ವರ್ಷದ ಅನೀಲ್ ಮೃತ ದುರ್ದೈವಿ. ಮುಂಬೈನಲ್ಲಿದ್ದ ಪತ್ನಿ ಜೊತೆ ಜಗಳವಾಡಿಕೊಂಡಿದ್ದ. ಇದೇ ವಿಚಾರವಾಗಿ ಮದ್ಯ ಅಮಲಿನಲ್ಲಿದ್ದ‌ ಅನಿಲ್ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಕಿಟಕಿ ಬಳಿ ನಿಂತು ಬೇಡ ಬೇಡ ಅಂದ್ರೂ ಫ್ಯಾನಿಗೆ ಹಗ್ಗ ಹಾಕಿದ. ನೋಡ ನೋಡ್ತಿದ್ದಂತೆ ಕುತ್ತಿಗೆಗೆ ಹಗ್ಗ ಹಾಕಿಕೊಂಡು ನೇಣಿಗೆ ಶರಣಾದ.

ಅಕ್ಕ ಪಕ್ಕದ ಮನೆಯವರು ಬಾಗಿಲು ಮುರಿದು ಒಳನುಗ್ಗವಷ್ಟರಲ್ಲಿ ಅನಿಲ್ ಮೃತಪಟ್ಟಿದ್ದ. ಈ ಸಂಪೂರ್ಣ ದೃಶ್ಯ ಅಕ್ಕಪಕ್ಕದ ಮನೆಯವರ ಮೊಬೈಲ್​ನಲ್ಲಿ ಸೆರೆಯಾಗಿದೆ. ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net