ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆ; ಹೆಂಡ್ತಿಯನ್ನು ಉಸಿರುಗಟ್ಟಿಸಿ ಕೊಂದ ಗಂಡ ತಾನು ನೇಣು ಬಿಗಿದುಕೊಂಡ..

death
ಸಾಂದರ್ಭಿಕ ಚಿತ್ರ
Published on

ವಿಜಯಪುರ: ಪತಿಯೊಬ್ಬ ಪತ್ನಿಯನ್ನು ಕೊಂದು ಹಾಕಿದ್ದಲ್ಲದೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಜಯಪುರ ಜಿಲ್ಲೆಯ ತೊರವಿ ಗ್ರಾಮದ ಸಂತೋಷ ಈಟಿ (33) ಮತ್ತು ಶ್ರೀದೇವಿ ಈಟಿ (28) ದಂಪತಿ ಸಾವಿಗೀಡಾದವರು.

ಪತಿ ಸಂತೋಷ್​ ಮೊದಲು ಹೆಂಡತಿ ಶ್ರೀದೇವಿಯನ್ನು ತಲೆದಿಂಬಿನಿಂದ ಉಸಿರುಟ್ಟಿಸಿ ಕೊಂದು ಹಾಕಿದ್ದಾನೆ. ಪತ್ನಿಯನ್ನು ಕೊಲೆ ಮಾಡಿದ ಬಳಿಕ ತಾನು ಮನೆಯಲ್ಲೇ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಪತ್ನಿಯ ಶೀಲದ ಮೇಲಿನ ಶಂಕೆಯಿಂದ ಈ ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿದೆ. ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net