More

    ಪೊಲೀಸರಿಂದ ವಿಚಾರಣೆ ಎದುರಿಸಿದ ನಟಿ ರಚಿತಾ ರಾಮ್​; ಅಂದು ನಾನು ಅಲ್ಲಿರಲಿಲ್ಲ ಎಂದರು..

    ರಾಮನಗರ: ಬಿಡದಿ ಪೊಲೀಸ್ ಠಾಣೆಗೆ ಹಾಜರಾದ ನಟಿ ರಚಿತಾ ರಾಮ್​ ಇಂದು ಪೊಲೀಸರಿಂದ ವಿಚಾರಣೆ ಎದುರಿಸಿ, ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ನಡೆದ ಅವಘಡದಲ್ಲಿ ಸಹಕಲಾವಿದರೊಬ್ಬರು ಮೃತಪಟ್ಟ ಪ್ರಕರಣದ ಹಿನ್ನೆಲೆಯಲ್ಲಿ ಅವರು ಪೊಲೀಸರ ಎದುರು ಹಾಜರಾಗಿದ್ದಾರೆ.

    ಬಿಡದಿಯ ಜೋಗಯ್ಯನಪಾಳ್ಯ ಗ್ರಾಮದಲ್ಲಿ ಆಗಸ್ಟ್ 9ರಂದು ನಡೆದ ಶೂಟಿಂಗ್​ ಸಂದರ್ಭ ಶಾರ್ಟ್ ಸರ್ಕ್ಯೂಟ್ ಉಂಟಾಗಿ ವಿವೇಕ್ ಎಂಬ ಕಲಾವಿದ ಸಾವಿಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕಿ ಆಗಿರುವ ರಚಿತಾ ರಾಮ್​ಗೆ ವಿಚಾರಣೆಗೆ ಹಾಜರಾಗುವಂತೆ ರಾಮನಗರ ಉಪ ವಿಭಾಗದ ಡಿವೈಎಸ್​​ಪಿ ಮೋಹನ್​ ಕುಮಾರ್ ಸೂಚಿಸಿದ್ದರು. ಆ ಪ್ರಕಾರ ರಚಿತಾ ರಾಮ್​ ಇಂದು ವಿಚಾರಣೆಗೆ ಹಾಜರಾಗಿದ್ದರು.

    ಇದನ್ನೂ ಓದಿ: ನಾನು ಟೈಟಾಗಿದ್ದೇನೆ ಗೊತ್ತಾಗಿಲ್ಲ, ಇನ್ನೊಂದು ಕಾರ್ಡ್ ನಂಬರ್ ಕೊಡಿ ಎಂದ; 730 ರೂಪಾಯಿ ವೈನ್‌ಗೆ 1.79 ಲಕ್ಷ ರೂ. ಧೋಖಾ

    ಅಂದು ಘಟನೆ ನಡೆದ ಸಂದರ್ಭ ನಾನು ಸ್ಥಳದಲ್ಲಿ ಇರಲಿಲ್ಲ. ಮಾಧ್ಯಮಗಳಲ್ಲಿ ನೋಡಿ ವಿಷಯ ತಿಳಿದುಕೊಂಡೆ. ಆವತ್ತು ನಾನು ಅಲ್ಲಿರಲೇ ಇಲ್ಲ ಎಂದು ಸ್ಪಷ್ಟಪಡಿಸಿದ ರಚಿತಾ, ಚಿತ್ರದಲ್ಲಿ ಕೇವಲ ನಾಯಕ ನಾಯಕಿಗೆ ಮಾತ್ರವಲ್ಲ, ಫೈಟ್ ಮಾಡುವವರಿಗೂ ಅಷ್ಟೇ ಪ್ರಾಧಾನ್ಯತೆ ಕೊಡಬೇಕು. ದುರಂತ ನಡೆಯುವ ಹಿಂದಿನ ದಿನಗಳ ಶೂಟಿಂಗ್ ವೇಳೆ ನಾನು ಸ್ಥಳದಲ್ಲಿ ಇದ್ದೆ. ಆದರೆ ಘಟನೆ ನಡೆದ‌ ದಿನ ಸ್ಥಳದಲ್ಲಿ ನಾನು ಇರಲಿಲ್ಲ. ನಾನು ಸ್ಥಳದಲ್ಲಿ ಇದ್ದಿದ್ದರೆ ಖಂಡಿತ ಏನು ನಡೆಯಿತು ಎಂದು ವಿವರಿಸುತ್ತಿದ್ದೆ ಎಂದರು.

    ಗಾಲಿ ಜನಾರ್ದನ ರೆಡ್ಡಿ ಮತ್ತೆ ಸಕ್ರಿಯ ರಾಜಕಾರಣಕ್ಕೆ ಬರುತ್ತಾರಾ?; ರಾಯರ ಸನ್ನಿಧಿಯಲ್ಲಿ ಏನೆಂದರು ಗಣಿ ಉದ್ಯಮಿ?

    ದಂಪತಿಯ ಕೊಲೆ, ಬಾಡಿಗೆಗೆ ಇದ್ದಿದ್ದವನೇ ಕೊಲೆಗಾರ; ವರಮಹಾಲಕ್ಷ್ಮೀ ಹಬ್ಬದಂದು ನಡೆದಿದ್ದ ಡಬಲ್​ ಮರ್ಡರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts