ಬೇಟೆಯಾಡಿದ್ದ ಜಿಂಕೆ ಮಾಂಸದ ಸಮೇತ ಸಿಕ್ಕಿಬಿದ್ದ ಐವರು! 2 ನಾಡಬಂದೂಕು ವಶ

Hanoor bete
Published on

ಹನೂರು: ಜಮೀನಿನ ತೋಟ ಮನೆಯಿಂದರಲ್ಲಿ ಜಿಂಕೆ ಮಾಂಸ ಹೊಂದಿದ್ದ 5 ಮಂದಿ ಸಹಿತ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಹನೂರು ಉಪವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಳ್ಳುವಲ್ಲಿ ಶುಕ್ರವಾರ ಯಶಸ್ವಿಯಾಗಿದ್ದಾರೆ.

ಹನೂರು ತಾಲೂಕಿನ ರಾಮಾಪುರ ಗ್ರಾಮದ ಲಕ್ಷ್ಮಣ (55) , ಕಾಂಚಳ್ಳಿ ಗ್ರಾಮದ ಮುತ್ತಪ್ಪ (40), ಮುತ್ತುರಾಜು (35), ನಾಗಣ್ಣನಗರದ ಪೆರಿಯಣ್ಣ ( 23), ಅಜ್ಜೀಪುರ ಗ್ರಾಮದ ಗೋವಿಂದರಾಜು (27) ಬಂಧಿತರಾಗಿದ್ದು, ಮತ್ತೊಬ್ಬ ಕಾಂಚಳ್ಳಿ ಗ್ರಾಮದ ಸತೀಶ (27) ತಲೆಮರೆಸಿಕೊಂಡಿದ್ದು,  ಈತನ ಪತ್ತೆಗಾಗಿ ಅಧಿಕಾರಿಗಳು ಬಲೆ ಬೀಸಿದ್ದಾರೆ.

ಹನೂರು ಬಫರ್ ವಲಯದ ಹನೂರು ಶಾಖೆಯ ಹನೂರು ಗಸ್ತಿನ ಬೆಳತ್ತೂರುಗುಡ್ಡ ಅರಣ್ಯ ಪ್ರದೇಶದಲ್ಲಿ ವನ್ಯಪ್ರಾಣಿಯಾದ 3 ಜಿಂಕೆಗಳನ್ನು ಭೇಟೆಯಾಡಿ ಉದ್ದನೂರು ಗ್ರಾಮದ ತೋಟದ ಮನೆಯಲ್ಲಿ ಮಾಂಸವನ್ನು ಇಟ್ಟಿರುವ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.

ಹನೂರು ಬಫರ್ ವಲಯದ ವಲಯ ಅರಣ್ಯಾಧಿಕಾರಿ ಸೈಯದ್‌ಸಾಬ್ ನದಾಫ್ , ಉಪವಲಯ ಅರಣ್ಯಾಧಿಕಾರಿ ಆರ್.ಸಾಲನ್, ಪ್ರಸಾದ್.ಕೆ , ಅರಣ್ಯ ರಕ್ಷಕರಾದ ಅನಿಲ್ ಕುಮಾರ್ ನಂದೀಶ್.ವಿ . ಪರಶುರಾಮಭಜಂತ್ರಿ ಹಾಗೂ ಇತರೆ ಸಿಬ್ಬಂದಿ ವರ್ಗದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net