ಶತಮಾನದ ಆಲದ ಮರಕ್ಕೆ ಮರು ಜೀವ

hundred-years-old-banyan-tree-shifted
Published on

ಕಾರವಾರ: ಅರಗಾ ಪತಂಜಲಿ ಆಸ್ಪತ್ರೆಯ ಆವರಣದಲ್ಲಿದ್ದ ಶತಮಾನ ಕಂಡ ಬೃಹತ್ ಆಲದ ಮರವನ್ನು ಸ್ಥಳಾಂತರಿಸಿ ಪುನಃ ನೆಡಲಾಗಿದೆ.
ಭಾರತೀಯ ನೌಕಾಸೇನೆಯ ಐಎನ್‌ಎಸ್ ಪತಂಜಲಿ ಆಸ್ಪತ್ರೆಯ ವಿಸ್ತರಣೆ ಕಾರ್ಯ ನಡೆದಿದೆ. ಅದಕ್ಕಾಗಿ ಸುಮಾರು 80 ಚದರ ಅಡಿಗೂ ಹೆಚ್ಚು ವಿಸ್ತೀರ್ಣ ಹೊಂದಿದ್ದ ಬೃಹತ್ ಆಲದ ಮರವನ್ನು ಕಿತ್ತು ಬೇರೆಡೆ ನೆಡಲಾಯಿತು.

ಮೊದಲು ಟೊಂಗೆಗಳನ್ನು ಕಡಿಯಲಾಯಿತು. ಎರಡು ಜೆಸಿಬಿ, ಕ್ರೇನ್ ಬಳಸಿ ಮೂಲ ಕಾಂಡವನ್ನು ಬೇರು ಸಮೇತ ಕಿತ್ತು ಸಾಗಿಸಿ, ಬೇರೆ ಸ್ಥಳದಲ್ಲಿ ಬೃಹತ್ ಹೊಂಡ ತೆಗೆದು ಅದನ್ನು ಹೂಳಲಾಯಿತು.

ಅರಣ್ಯ ಇಲಾಖೆ ಅಽಕಾರಿಗಳ ಸಲಹೆಯ ಮೇರೆಗೆ ನೌಕಾಸೇನೆಯ ಗುತ್ತಿಗೆದಾರರು ಈ ಕಾರ್ಯ ಕೈಗೊಂಡಿದ್ದಾರೆ ಎಂದು ಭಾರತೀಯ ನೌಕಾಸೇನೆಯ ಪ್ರಕಟಣೆ ತಿಳಿಸಿದೆ. ಬದುಕತ್ತಾ ಆಲದ ಮರ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net