More

    ಸಂಚಾರಕ್ಕೆ ಮುಕ್ತವಾದ ರಾಜ್ಯದ ಎರಡನೇ ಅತಿ ದೊಡ್ಡ ಸುರಂಗ

    ಕಾರವಾರ: ರಾಷ್ಟ್ರೀಯ ಹೆದ್ದಾರಿ -66 ರ ಚತುಷ್ಪಥ ವಿಸ್ತರಣೆ ಭಾಗವಾಗಿ ನಿರ್ಮಾಣವಾದ ಸುರಂಗ ಹಾಗೂ ಮೇಲ್ಸೇತುವೆಯನ್ನು ಸೋಮವಾರ ಸಂಚಾರಕ್ಕೆ ಮುಕ್ತ ಮಾಡಲಾಗಿದೆ.

    ಇದು ರಾಜ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎರಡನೇ ಅತಿ ದೊಡ್ಡ ಸುರಂಗವಾಗಿದೆ. ಒಂದು ಸುರಂಗವು 550 ಮೀ ಉದ್ದವಿದ್ದರೆ ಇನ್ನೊಂದು 594 ಮೀಟರ್‌ ಉದ್ದವಿದೆ.

    ಹೊಸಪೇಟೆ ಬಳಿ ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿದ ಸುರಂಗವು ರಾಜ್ಯದ ಅತಿ ಉದ್ದದ ಸುರಂಗವಾಗಿದೆ. ಅದು 687 ಮೀ ಉದ್ದವಿದೆ.

    ನಗರದ ಆರ್‌ಟಿಒ ಕಚೇರಿಯಿಂದ ಲಂಡನ್ ಬ್ರಿಜ್‌ವರೆಗೆ 1.5 ಕಿಮೀ ಉದ್ದದ ಎರಡು ಪ್ರತ್ಯೇಕ ಮೇಲ್ಸೇತುವೆ(ಫ್ಲೈ ಓವರ್)ಗಳನ್ನು ನಿರ್ಮಿಸಲಾಗಿದೆ.

    ಅದರಲ್ಲಿ ಬಲ ಭಾಗದ ಮೇಲ್ಸೇತುವೆಯ ಮೇಲೆ ಡಿಸೆಂಬರ್‌ನಲ್ಲಿಯೇ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇನ್ನೊಂದು ಸೇವೆಯಲ್ಲೂ ಈಗ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

    ಇದನ್ನೂ ಓದಿ:ಅಂಬಿ ಪುತ್ರನ ಕಲ್ಯಾಣ; ಅಭಿಷೇಕ್​-ಅವಿವಾಗೆ ಶುಭ ಕೋರಿದ ಸ್ಟಾರ್​​ ನಟ,ನಟಿಯರ ಫೋಟೋ ನೋಡಿ

    ಲಂಡನ್ ಬ್ರಿಜ್‌ನಿಂದ ಬಿಣಗಾಕ್ಕೆ ಸಂಪರ್ಕಿಸುವ ಬಲ ಭಾಗದ ಸುರಂಗ ಮಾರ್ಗದಲ್ಲಿ ಈಗಾಗಲೇ ವಾಹನ ಸಂಚಾರ ನಡೆದಿದೆ.

    ಸೋಮವಾರದಿಂದ ಎಡ ಭಾಗದ ಸುರಂಗವನ್ನೂ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಇದರಿಂದ 4 ಕಿಮೀ ದೂರಬಿದ್ದ ಬಿಣಗಾ ಈಗ 1 ಕಿಮೀಗೆ ಇಳಿದಿದೆ.

    ವಾಹನದಲ್ಲಿ ಕೇವಲ ಒಂದುವರೆ ನಿಮಿಷದಲ್ಲಿ ಕಾರವಾರದಿಂದ ಬಿಣಗಾ ತಲುಪಬಹುದಾಗಿದೆ.
    2016 ರಿಂದ ಮೇಲ್ಸೇತುವೆ ಹಾಗೂ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಯಿತು. ನಿರಂತರ ಏಳು ವರ್ಷಗಳ ಕಾಮಗಾರಿಯ ಬಳಿಕ ಅಂತೂ ಎರಡೂ ಸುರಂಗ ಹಾಗೂ ಮೇಲ್ಸೇತುವೆಗಳು ವಾಹನ ಸಂಚಾರಕ್ಕೆ ತೆರೆದುಕೊಂಡಿವೆ.
    ಎಲ್ಲ ಕಾಮಗಾರಿ ಮುಗಿಸಿ:
    ಮೇಲ್ಸೇತುವೆ ಹಾಗೂ ಸುರಂಗ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಕಾರವಾರ, ಅಂಕೋಲಾ ನಡುವೆ ಇನ್ನೂ 6 ಸ್ಥಳಗಳಲ್ಲಿ ಕಾಮಗಾರಿ ಮುಕ್ತಾಯವಾಗಬೇಕಿದ್ದು, ಅದನ್ನು ಶೀಘ್ರ ಮುಗಿಸುವಂತೆ ಸೂಚಿಸಲಾಗಿದೆ. ಇನ್ನು ಮಳೆಗಾಲದಲ್ಲಿ ಗುಡ್ಡ ಕುಸಿತ, ನೀರು ತುಂಬದಂತೆ ನೋಡಿಕೊಳ್ಳುವ ಜವಾಬ್ದಾರಿ ಚತುಷ್ಪಥ ನಿರ್ಮಾಣ, ನಿರ್ವಹಣೆಯ ಗುತ್ತಿಗೆ ಪಡೆದ ಐಆರ್‌ಬಿ ಕಂಪನಿಯದ್ದಾಗಿದೆ ಎಂದರು.
    ಸಮರ್ಪಕ ವೇತನ ನೀಡಿ
    ಶಾಸಕ ಸತೀಶ ಸೈಲ್ ಮೇಲ್ಸೇತುವೆ ಹಾಗೂ ಸುರಂಗವನ್ನು ಸೋಮವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಐಆರ್‌ಬಿ ಟೋಲ್‌ನಲ್ಲಿ ಇರುವ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು. ಈ ಬಗ್ಗೆ ಜಿಲ್ಲಾಽಕಾರಿ ಅವರು ಸಭೆ ನಡೆಸಿ, ಸಮಸ್ಯೆ ಬಗೆಹರಿಸಬೇಕು ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ, ಪಕ್ಷದ ಜಿಲ್ಲಾ ವಕ್ತಾರ ಕೆ.ಶಂಭು ಶೆಟ್ಟಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts