ಮಠದ ಹುಂಡಿ ಹೊತ್ತೊಯ್ದ ಖದೀಮರು

14 mlv 2
Published on

ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಗ್ರಾಮದಲ್ಲಿ ಬುಧವಾರ ರಾತ್ರಿ ದಾಸೋಹ ಮಠದ ಬಾಗಿಲ ಬೀಗ ಒಡೆದು ದೇವರ ಹುಂಡಿಯನ್ನು ಕಳ್ಳರು ಹೊತ್ತೊಯ್ದಿದ್ದಾರೆ.


ಗ್ರಾಮದ ಮಂಟೇಸ್ವಾಮಿ ಮಠದ ಬೀದಿಯ ದಾಸೋಹ ಮಠದಲ್ಲಿ ಪ್ರಸ್ತುತ ಯಾವುದೇ ಸ್ವಾಮೀಜಿ ಇಲ್ಲ. ದೇವರ ಉತ್ಸವ ಮೂರ್ತಿ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಕೆಯಾಗುವ ಸಾಮಗ್ರಿಗಳನ್ನು ಇರಿಸಲಾಗಿತ್ತು. ಪ್ರತಿ ತಿಂಗಳ ಅಮಾವಾಸ್ಯೆ, ಹುಣ್ಣಿಮೆ ದಿನಗಳಲ್ಲಿ ಮಠದಲ್ಲಿ ವಿಶೇಷ ಪೂಜಾ ಕಾರ್ಯಗಳು ಜರುಗುತ್ತಿದ್ದವು. ಈ ವೇಳೆ ಮಠದಲ್ಲಿನ ಪೂಜೆಗೆ ಆಗಮಿಸುತ್ತಿದ್ದ ಭಕ್ತರು ಕಾಣಿಕೆ ಹಣವನ್ನು ಹುಂಡಿಯಲ್ಲಿ ಹಾಕುತ್ತಿದ್ದರು. ಈ ಹುಂಡಿಯನ್ನು ಖದೀಮರು ಕಳ್ಳತನ ಮಾಡಿದ್ದಾರೆ. ಗುರುವಾರ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡರು ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net