ಚಿತ್ರದುರ್ಗದ ಪಾಳು ಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆ

chitradurga
Published on

ಚಿತ್ರದುರ್ಗ: ನಗರದ ಜೈಲ್ ರಸ್ತೆ ಪಾಳು ಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆಯಾಗಿದ್ದು, ಹಿಂದೆ ಈ ಮನೆಯಲ್ಲಿ ನಿವೃತ್ತ ಇಂಜಿನಿಯರ್ ಸೇರಿದಂತೆ ಐವರು ವಾಸವಿದ್ದರು ಎನ್ನಲಾಗಿದೆ. ನಿವತ್ತ ಇಂಜಿನಿಯರ್ ದೊಡ್ಡ ಸಿದ್ದವ್ವನ ಹಳ್ಳಿ ಮೂಲದವರೆನ್ನಲಾಗಿದೆ.

ನಿವೃತ್ತ ಲೋಕೋಪಯೋಗಿ ಇಲಾಖೆ ಜಗನ್ನಾಥ ರೆಡ್ಡಿ. ಇವರು ನಿವೃತ್ತರಾಗಿ ಮೂವತ್ತು ವರ್ಷವಾಗಿತ್ತಂತೆ. ಮನೆಯಲ್ಲಿ ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರರಾದ ಕೃಷ್ಣರೆಡ್ಡಿ, ನರೇಂದ್ರ ರೆಡ್ಡಿ, ಮಗಳು ತ್ರಿವೇಣಿ ಇದ್ದರು. ಈ ಸಂಬಂಧ ಸಂಬಂಧಿಕ ಪವನ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಜಗನ್ನಾಥ ರೆಡ್ಡಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಯಾರೊಂದಿಗೂ ಸಂಪರ್ಕವಿರಲಿಲ್ಲ ಎನ್ನಲಾಗಿದೆ. ಗುರುವಾರ ರಾತ್ರಿ ಪರಿಶೀಲಿಸಿದ್ದ ಪೊಲೀಸರು ಮೂರು ಅಸ್ಥಿಪಂಜರ ದೊರೆತಿವೆ ಎಂದು ತಿಳಿಸಿದ್ದರು. ಆದರೆ ಬೆಳಗ್ಗೆ ಐದು ಅಸ್ತಿ ಪಂಜರ ಪತ್ತೆಯಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಥಳ ಪರಿಶೀಲಿಸಿ, ದಾವಣಗೆರೆಗೆ ಪ್ರಯೋಗಾಲಯಕ್ಕೆ ಅಸ್ಥಿ ಪಂಜರ ಸಂಗ್ರಹಿಸಿ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ‌.

ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಎಸ್ಪಿ ಮತ್ತಿತರ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net