ಶಿರಸಿಯಲ್ಲಿ ಮಾನವ ಸರಪಳಿ ಮಾಡಿ ಪ್ರತಿಭಟನೆ

Sirsi Strke
Published on

ಶಿರಸಿ:ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ನ್ಯಾಯಂಗ ಸುಪರ್ದಿಯಲ್ಲಿ ಮರುತನಿಖೆ ಮಾಡಬೇಕು, ಮಣಿಪುರ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಶುಕ್ರವಾರ ವಿವಿಧ ಸಂಘಟನೆಗಳ ಮುಖಂಡರು ನಗರದ ಹಳೆಯ ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಮಾಜಿಕ ಕಾರ್ಯಕರ್ತೆ ಅಕ್ಷತಾ ಕೆ.ಸಿ.,ಮಹಿಳೆಯೊಬ್ಬರು ರಾಷ್ಟಪತಿಯಾಗಿರುವ ದೇಶದಲ್ಲಿ ಮಹಿಳೆಯ ಅವಮಾನ ವಾಗುತ್ತಿದೆ. ಹೀಗಿದ್ದರೆ ಭಾರತ ವಿಶ್ವಗುರುವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಮಣಿಪುರದಲ್ಲಿ ಮಹಿಳೆಯ ಬೆತ್ತಲೆ ಮೆರವಣಿಗೆ ನಡೆಸಿ ಅತ್ಯಾಚಾರ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕು. ಅಲ್ಲಿನ ಹಿಂಸಾಚಾರವನ್ನು ನಿಯಂತ್ರಿಸದ ಸರ್ಕಾರವನ್ನು ತಕ್ಷಣ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣವನ್ನು ನ್ಯಾಯಾಂಗ ಸುಪರ್ದಿಯಲ್ಲಿ ಮರು ತನಿಖೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಹಿತೆಂದ್ರ ನಾಯ್ಕ, ನಾಗೇಶ ನಾಯ್ಕ ಕಾಗಲ್, ಶಭೀನಾ ಬಾನು, ನಾಗಪ್ಪ ನಾಯ್ಕ,ಮಂಜುನಾಥ ಖರ್ಜಗಿ,ವಿಶ್ವನಾಥ ಗೌಡ, ರಾಜೇಂದ್ರಕುಮಾರ,ಮಾದೇವ ಚಲವಾದಿ,ಶೇಖರ ಪೂಜಾರಿ,ಅನಿಲ ನಾಯ್ಕ, ಸಿಸ್ಟರ್ ಸೆಲ್ವಿಯಾ ಮುಂತಾದವರು ಪ್ರತಿಭಟನೆಯಲ್ಲಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net