ಹಳಿಯಾಳ ಪುರಸಭೆಯಲ್ಲಿ ಡಿಜಿಟಲ್ ಪಾವತಿಗೆ ಅವಕಾಶ

Municipalities
Published on

ಹಳಿಯಾಳ: ಇಲ್ಲಿನ ಪುರಸಭೆಗೆ ಸಂಬಂಧಪಟ್ಟಂತೆ ಇನ್ನು ಮುಂದೆ ಯಾವುದೇ ಹಣ ಪಾವತಿಯನ್ನು (ಪೇಮೆಂಟ್) ಡಿಜಿಟಲ್ ಮೂಲಕ ಮಾಡಬಹುದಾಗಿದೆ. ಪುರಸಭೆ ಗುರುವಾರದಿಂದ ಡಿಜಿಟಲ್ ಪಾವತಿ ಮಾಡಲು ಗ್ರಾಹಕರಿಕೆ ಅನುಕೂಲ ಮಾಡಿಕೊಟ್ಟಿದೆ.

ಮುಖ್ಯಾಧಿಕಾರಿ ಅಶೋಕ ಸಾಳೆನ್ನವರ ಅಧಿಕಾರ ವಹಿಸಿಕೊಂಡ ನಂತರ ಪುರಸಭೆಗೆ ಹೊಸ ಮೆರಗು ನೀಡುವಲ್ಲಿ ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ಇದೀಗ ಪೇಮೆಂಟ್ ಡಿಜಿಟಲೀಕರಣವನ್ನು ಪುರಸಭೆಗೆ ಅಳವಡಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಆಸ್ತಿ ತೆರಿಗೆ, ನೀರಿನ ನಳದ ಬಿಲ್, ಅಂಗಡಿ ಪರವಾನಗಿ ಶುಲ್ಕ ಇನ್ನೂ ಮತ್ತಿತರ ಹಣ ಸಂದಾಯ ಮಾಡಲು ಯುಪಿಐ ಕ್ಯೂ ಆರ್ ಕೋಡ್‌ಗಳನ್ನು ಸಂಬಂಧಿಸಿದ ಪ್ರತಿಯೊಂದು ಕೌಂಟರ್‌ಗಳ ಮುಂದೆ ಅಳವಡಿಸಲಾಗಿದೆ. ಪುರಸಭೆಯ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೊಸತನಕ್ಕೆ ತೆರೆದುಕೊಳ್ಳುವ ಮನಸು ಪ್ರತಿಯೊಬ್ಬ ಅಧಿಕಾರಿಗೂ ಇರಬೇಕು. ಕೆಲಸದ ಒತ್ತಡ ದಿನೇದಿನೆ ಹೆಚ್ಚುತ್ತ ಹೋಗುತ್ತದೆ. ಆದಷ್ಟು ಸರಳ ಮತ್ತು ಸ್ಪಷ್ಟವಾಗಿ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ. ಅಶೋಕ ಸಾಳೇನ್ನವರ, ಪುರಸಭೆ ಮುಖ್ಯಾಧಿಕಾರಿ ಹಳಿಯಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net