

ಕೆ.ಆರ್.ಪೇಟೆ: ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಮಲೈ ಮಹದೇಶ್ವರರ ಹುಲಿವಾಹನ ಅಡ್ಡಪಲ್ಲಕ್ಕಿ ಉತ್ಸವ ಇತ್ತೀಚೆಗೆ ಜರುಗಿತು.
ಹುಲಿವಾಹನೋತ್ಸವ ಅಂಗವಾಗಿ ಮಲೈ ಮಹದೇಶ್ವರರ ಮೂರ್ತಿಯನ್ನು ಬೆಣ್ಣೆಯಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯದ ಸುತ್ತಲೂ ಉತ್ಸವ ಮೂರ್ತಿಯ ಹುಲಿವಾಹನ ಅಡ್ಡಪಲ್ಲಕ್ಕಿ ಉತ್ಸವ ನಡೆಸಿ ಲೋಕಕಲ್ಯಾಣಾರ್ಥವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಸೋಮನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಾಪಣ್ಣ, ಆಲಂಬಾಡಿಕಾವಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಆಶಾ ದೇವರಾಜು, ಎ.ಎಂ.ಸಂಜೀವಪ್ಪ, ಡಾ.ಅಂಚಿ ಸಣ್ಣಸ್ವಾಮಿಗೌಡ, ಮಲ್ಲಿಕಾರ್ಜುನ ಭಾಗವಹಿಸಿದ್ದರು.