

ಹಾರೋಹಳ್ಳಿ: ತಾಲೂಕಿನ ಹುಳಗೊಂಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂದ ಚುನಾವಣೆಯಲ್ಲಿ ಜೆಡಿಎಸ್ ಪಾರುಪತ್ಯ ಸಾಧಿಸಿದೆ.
ಸಂದ ಕಚೇರಿ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು 10 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಗೆಲ್ಲುವ ಮೂಲಕ ಹತ್ತು ವರ್ಷಗಳಿಂದ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಸಂ ಜೆಡಿಎಸ್ ತೆಕ್ಕೆಗೆ ಜಾರಿತು.
ಕೆಂಪೀರಯ್ಯ, ಬಸವರಾಜು, ಶ್ರೀನಿವಾಸ, ಎಚ್.ಎಸ್.ಮುನಿರಾಜು, ರುದ್ರಯ್ಯ, ಮುನೀರಯ್ಯ, ರತ್ನಮ್ಮರಾಮಕೃಷ್ಣ, ಪಾರ್ವತಮ್ಮ, ಹೊನ್ನೇಶ್, ಕಮಲಮ್ಮ ನಿರ್ದೇಶಕರಾಗಿ ಆಯ್ಕೆಯಾದರು.
ತೀವ್ರ ಹಣಾಹಣಿಯಿಂದ ಕೂಡಿದ ಚುನಾವಣೆಯಲ್ಲಿ 2,3,5 ಮತಗಳ ಅಂತರದಲ್ಲೇ ಅಭ್ಯರ್ಥಿಗಳು ಜಯಗಳಿಸಿದ್ದಾರೆ. 10 ವರ್ಷದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಆಡಳಿತ ಕೊನೆಗೊಂಡಿದೆ. ಚುನಾವಣೆ ಅಧಿಕಾರಿಗಳಾಗಿ ಸಹಕಾರ ಇಲಾಖೆಯ ಪುರುಷೋತ್ತಮ್ ನೇತೃತ್ವದ ತಂಡ ನಡೆಸಿಕೊಟ್ಟರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎನ್. ರಾಮು ಮಾತನಾಡಿ, ಡೈರಿಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವುದು ಆಡಳಿತ ಮಂಡಳಿಯ ಕೈಯಲ್ಲಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ಡೇರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಕುಮಾರ್, ಗ್ರಾಪಂ ಮಾಜಿ ಅಧ್ಯ ಕೆ.ಎನ್. ಲಕ್ಷ$್ಮಣ್, ಮುಖಂಡರಾದ ಹೊನ್ನಾಲಗನದೊಡ್ಡಿ ಪ್ರದಿಪ್, ದಾಸೇಗೌಡ, ಭೀಮಣ್ಣ, ವೀರಪ್ಪ, ಕರಿಯಪ್ಪ, ಶ್ರೀನಿವಾಸ್, ರುದ್ರಪ್ಪ, ಜಿಮ್ ಕಿರಣ್, ಆನಂದ, ಆಟೋ ಶ್ರೀನಿವಾಸ್, ಕಾರ್ತಿಕ್, ಹೇಮಂತ್, ಕರಿಯಪ್ಪ ಇತರರು ಇದ್ದರು.