

ಮಾಗಡಿ: ಬೃಹತ್ ಗಾತ್ರದ ಹೆಬ್ಬಾವೊಂದು ತಾಲೂಕಿನ ಸೋಲಾರ್ ಪ್ಲಾಂಟ್ ನಲ್ಲಿ ಪತ್ತೆಯಾಗಿದೆ.
ತಾಲೂಕಿನ ಗೆಜ್ಜಗಾರಗುಪ್ಪೆ ಗ್ರಾಮದ ಬಳಿಯ ಸೋಲಾರು ಪ್ಲಾಂಟ್ನಲ್ಲಿ ಬುಧವಾರ ಬೆಳಗ್ಗೆ ಸುಮಾರು 7 ಅಡಿಯ ಹೆಬ್ಬಾವು ಪತ್ತೆಯಾಗಿದ್ದು, ಸ್ನೇಕ್ ರಾಯ ಅವರ ನೆರವಿನೊಂದಿಗೆ ಅದನ್ನು ಹಿಡಿದು ಸಾವನದುರ್ಗ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡುವ ಮೂಲಕ ರಕ್ಷಿಸಲಾಯಿತು.
ತಾಲೂಕಿನ ವೈಜಿಗುಡ್ಡ, ಹೊಸಪಾಳ್ಯ ಕೆರೆ, ಕೆಂಪಸಾಗರ ತೋಟ ಸೇರಿದಂತೆ 7 ನೇ ಕಡೆಗಳಲ್ಲಿ ಕಾಣಿಸಿಕೊಂಡ ಹೆಬ್ಬಾವನ್ನು ರಕ್ಷಿಸಿ ಸುರಕ್ಷಿತ ಪ್ರದೇಶಗಳಿಗೆ ಬಿಡಲಾಗಿದೆ.
ತಾಲೂಕಿನಲ್ಲಿ ಸಾವನದುರ್ಗ, ಚೀಲೂರು, ಭಟ್ಟರಕುಪ್ಪೆ, ಸಿದ್ದದೇವರ ಬೆಟ್ಟ, ಮಂಚನ ಬೆಲೆ ಕಿರು ಅರಣ್ಯ ಸೇರಿದಂತೆ ಅನೇಕ ಅರಣ್ಯ ಪ್ರದೇಶಗಳಿವೆ ಇಲ್ಲಿನ ಅರಣ್ಯ ಪ್ರದೇಶ ಮತ್ತು ಖಾಸಗಿ ಕಡೆ ಹೆಬ್ಬಾವು ಪ್ರತ್ಯಕ್ಷವಾದರೆ ಅರಣ್ಯ ಇಲಾಖೆಯಲ್ಲಿ ಹಾವು ಇಡಿಯುವ ಸಿಬ್ಬಂದಿಗಳಿಲ್ಲ ಖಾಸಗಿಯವರನ್ನೆ ಅವಲಂಭಿಸಿಕೊಳ್ಳಲಾಗಿದೆ ಈ ಬಗ್ಗೆ ಅರಣ್ಯ ಇಲಾಖೆ ಸಚಿವರು ಎಚ್ಚೆತ್ತು ಹಾವು ಹಿಡಿಯುವರನ್ನು ನೇಮಕ ಮಾಡುವಂತೆ ಉರುಗ ಪ್ರೇಮಿಗಳು ಒತ್ತಾಯಿಸಿದ್ದಾರೆ.
ಸ್ನೇಕ್ ರಾಯ ಮಾತನಾಡಿ, ಹೆಬ್ಬಾವು ವಿಷ ರಹಿತ ಹಾವಾಗಿದ್ದು ಇದರಿಂದ ಮನುಷ್ಯರಿಗೆ ಯಾವುದೆ ಅಪಯಾಯ ವಿಲ್ಲ, ಹೆಬ್ಬಾವು ಕಂಡರೆ ಕೂಡಲೇ ನಮಗೆ ತಿಳಿಸಿದರೆ ಅದನ್ನು ರಕ್ಷಿಸಿ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು. ಇಲ್ಲಿಯವರೆಗೂ 6 ಸಾವಿರ ಹಾವನ್ನು ಹಿಡಿಯಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಅರಣ್ಯ ಇಲಾಖೆಯ ಗಂಗಾಧರ್ ಇತರರು ಇದ್ದರು.