

ಮಾಗಡಿ : ಸುಮಾರು 2 ಅಡಿ ಅಗಲ 2 ಅಡಿ ಉದ್ದ 15 ಕೆಜಿಯ ಬೃಹತ್ ಗಾತ್ರದ 2 ಅಣಬೆ ರೈತನ ಜಮೀನಿನಲ್ಲಿ ಬೆಳೆದಿದೆ.
ತಾಲೂಕಿನ ದೊಡ್ಡಮುದಿಗೆರೆ ಕಾಲೋನಿ ಗ್ರಾಮದ ರೈತ ರಂಗಸ್ವಾಮಿ ಎಂಬುವರ ಜಮೀನಿನಲ್ಲಿ ಎರಡು ಅಣಬೆಗಳು ಒಂದು ಕೊಂಡಂತೆ ಬೆಳೆದಿವೆ ಈ ಅಣಬೆ ನೈಸರ್ಗಿಕವಾಗಿ ಬೆಳೆದಿದ್ದು ಎಂದಿನಂತೆ ರೈತ ರಂಗಸ್ವಾಮಿ ತಮ್ಮ ಜಮೀನಿಗೆ ತೆರಳಿದ ವೇಳೆ ಅಣಬೆ ಬೆಳೆದಿರುವುದು ಕಂಡು ಬಂದಿದೆ.
ಈ ಹಣಬೆಯನ್ನು ಮಾರಾಟ ಮಾಡದೆ ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸಿದ್ದಾರೆ. ರೈತರು ತಮ್ಮ ಜಮೀನಿಗಳಲ್ಲಿ ಬೆಳೆ ಬೆಳೆಯಲು ರಾಸಾಯನಿಕ ಗೊಬ್ಬರ ಹೆಚ್ಚು ಆಳವಡಿಸುತ್ತಿರುವುದರಿಂದ ಅಣಬೆಗಳು ಬೆಳೆಯುತ್ತಿರಲಿಲ್ಲ ಆದರೆ ರಂಗಸ್ವಾಮಿ ಅವರ ಜಮೀನಿನಲ್ಲಿ ಬೃಹತ್ ಗಾತ್ರದ ಅಣಬೆ ಬೆಳೆದಿರುವುದರಿಂದ ರೈತರು ಸಂತೋಷ ವ್ಯಕ್ತಪಡಿಸಿದ್ದಾರೆ.
ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಲತಾ ಆರ್ ಕುಲಕರ್ಣಿ ಪ್ರತಿಕ್ರಿಯಿಸಿ ಅಣಬೆ ಎಂಬುದು ನೈಸರ್ಗಿಕ ವಾಗಿ ಬೆಳೆಯುತ್ತದೆ. ಇಷ್ಟು ಗಾತ್ರದಲ್ಲಿ ಬೆಳೆದಿದೆ ಎಂದರೆ ಅದು ಮಳೆಯ ವಾತಾವರಣದಿಂದಲ್ಲೂ ಕೂಡ. ಈ ಭಾಗದಲ್ಲಿ ಇಷ್ಟು ಗಾತ್ರದ ಅಣಬೆ ಬೆಳೆದಿರುವುದು ಇದೆ ಮೊದಲು ಎಂದರು.
ರೈತ ರಂಗಸ್ವಾಮಿ ಪ್ರತಿಕ್ರಿಯಿಸಿ ಸಣ್ಣ ಗಾತ್ರದ ಅಣಬೆ ನಮ್ಮ ಜಮಿನಿನಲ್ಲಿ ಸಾಕಷ್ಟು ಭಾರಿ ಬೆಳೆದಿದೆ ಆದರೆ ಈ ಭಾರಿ ದೊಡ್ಡ ಗಾತ್ರದಲ್ಲಿ ಅಣಬೆ ಬೆಳೆದಿರುವುದು ಖುಷಿ ತಂದಿದೆ ಎಂದರು.