

ಗೋಕಾಕ: ಹಿಂದು ಜಾಗರಣ ವೇದಿಕೆ ಗೋಕಾಕ ಟಕದಿಂದ ಹಮ್ಮಿಕೊಂಡಿದ್ದ ಬಹತ್ ಹಲಗೆ ಹಬ್ಬಕ್ಕೆ ಮಂಗಳವಾರ ನಗರದ ಕೊಳವಿ ಹನುಮಾನ ದೇವಸ್ಥಾನದಿಂದ ಚಾಲನೆ ನೀಡಲಾಯಿತು. ವಿವಿಧ ವಾದ್ಯಮೇಳದೊಂದಿಗೆ ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ಹಲಗೆ ಬಾರಿಸುತ್ತ ಮೆರವಣಿಗೆ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಸಾಗಿತು. ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಯುವ ನಾಯಕ ಅಮರನಾಥ ಜಾರಕಿಹೊಳಿ, ಆರ್ಎಸ್ಎಸ್ ಪ್ರಮುಖರಾದ ಎಂ.ಐ.ಹಾರುಗೇರಿ, ನಾರಾಯಣ ಮಠಾಧಿಕಾರಿ, ಎಂ.ಡಿ.ಚುನಮರಿ, ಪ್ರಕಾಶ ವರ್ಜಿ, ಹಿಂದು ಜಾಗರಣ ವೇದಿಕೆ ಪ್ರಮುಖರಾದ ಸಮರ್ಥ ಖಾಸನೀಸ್, ಅಂಕುಶ ರೇಣಕೆ, ಸಾಯಿ ಕೋಸಂದರ, ವಿಶ್ವ ಹಿಂದು ಪರಿಷತ್ ಪ್ರಮುಖ ಸದಾಶಿವ ಗುದಗಗೋಳ, ಕೃಷ್ಣಾ ಕುರಬಗಟ್ಟಿ, ವಿಲಾಸ ನಾಯಿಕ ಇತರರಿದ್ದರು.