ಹುಡೇಂ ಪಂಚಾಯಿತಿಗೆ ರಾಮಚಂದ್ರಪ್ಪ ಅಧ್ಯಕ್ಷ

khh
ಹುಡೇಂ ಗ್ರಾಪಂಗೆ 2 ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಮಚಂದ್ರಪ್ಪ ಹಾಗೂ ಪ್ಯಾರಿಮಾಬೀ ಗನಿಸಾಬ್ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಪಿಡಿಒ ಲಕ್ಷ್ಮೀಬಾಯಿ, ಕಾರ್ಯದರ್ಶಿ ಎಂ.ಟಿ.ತಿಪ್ಪೇರುದ್ರಪ್ಪ ಇತರರಿದ್ದರು.
Published on

ಕಾನಹೊಸಹಳ್ಳಿ: ಹುಡೇಂ ಗ್ರಾಪಂ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ರಾಮಚಂದ್ರಪ್ಪ ಅಧ್ಯಕ್ಷರಾಗಿ ಚುನಾಯಿತರಾದರೆ, ಉಪಾಧ್ಯಕ್ಷರಾಗಿ ಪ್ಯಾರಿಮಾಬೀ ಗನಿಸಾಬ್ ಅವಿರೋಧವಾಗಿ ಆಯ್ಕೆಯಾದರು.

ಎಸ್ಟಿಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಮಚಂದ್ರಪ್ಪ 7 ಮತ ಪಡೆದು ಜಯಗಳಿಸಿದರೆ, ಜೊಳ್ಳಜ್ಜರ ಪಾಲಯ್ಯ 6 ವೋಟ್ ಗಳಿಸಿ ಸೋತರು. ಆರು ಮತಗಳು ತಿರಸ್ಕೃಗೊಂಡವು.

ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಪ್ಯಾರಿಮಾಬೀ ಗನಿಸಾಬ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ಸಿಡಿಪಿಒ ನಾಗನಗೌಡ ಪಾಟೀಲ್ ಘೋಷಿಸಿದರು. ಚುನಾವಣಾ ಸಹಾಯಕರಾಗಿ ಬಸವರಾಜ, ಪಾಲಾಕ್ಷಯ್ಯ ಕಾರ್ಯನಿರ್ವಹಿಸಿದರು. ಗ್ರಾಪಂ ಪಿಡಿಒ ಲಕ್ಷ್ಮೀಬಾಯಿ, ಕಾರ್ಯದರ್ಶಿ ಎಂ.ಟಿ.ತಿಪ್ಪೇರುದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net