ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಗೆ ನವಲಮ್ಮ ಅಧ್ಯಕ್ಷೆ

Kanahosalli Gp
ಮಾಕನಡಕು ಗ್ರಾಪಂಗೆ ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಜೆ.ಎಂ.ರಾಜೇಶ್ ನಾಯ್ಕ, ಮಾಲಾಶ್ರೀ ಅವರನ್ನು ಸನ್ಮಾನಿಸಲಾಯಿತು. ಡಿಒ ಭರತ್ ಕುಮಾರ್ ಕಾರ್ಯದರ್ಶಿ ಯು.ಎಂ.ಪ್ರಕಾಶ, ರಾಜಕುಮಾರ ನಾಯ್ಕ ಇತರರಿದ್ದರು.
Published on

ಕಾನಹೊಸಹಳ್ಳಿ: ಗಂಡಬೊಮ್ಮನಹಳ್ಳಿ ಗ್ರಾಪಂಗೆ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ನವಲಮ್ಮ ರುದ್ರಮುನಿ, ಬಸವರಾಜ ಅವಿರೋಧ ಆಯ್ಕೆಯಾಗಿದ್ದಾರೆ.

ಎಸ್ಟಿ ಮಹಿಳೆಗೆ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಎರಡೂ ಸ್ಥಾನಗಳಿಗೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದರು. ಒಟ್ಟು 17 ಸದಸ್ಯರ ಪೈಕಿ 15 ಸದಸ್ಯರು ಬೆಂಬಲ ಸೂಚಿಸಿದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಿಪಂ ಎಇಇ ಮಲ್ಲಿಕಾರ್ಜುನ ಘೋಷಿಸಿದರು. ಪಿಡಿಒ ಸಿ.ರಾಮಕೃಷ್ಣ, ಸಿಬ್ಬಂದಿ ಇದ್ದರು.

ಮಾಕನಡುಕು ಗ್ರಾಪಂಗೆ ಅವಿರೋಧ ಆಯ್ಕೆ: ಮಾಕನಡಕು ಗ್ರಾಪಂಗೆ ಅಧ್ಯಕ್ಷರಾಗಿ ಜೆ.ಎಂ.ರಾಜೇಶ್ ನಾಯ್ಕ, ಉಪಾಧ್ಯಕ್ಷೆಯಾಗಿ ಮಾಲಾಶ್ರೀ ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಎಸ್ಸಿಗೆ ಅಧ್ಯಕ್ಷ ಸ್ಥಾನ, ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿತ್ತು. ಒಟ್ಟು 20 ಸದಸ್ಯರು ಹೊಂದಿರುವ ಗ್ರಾಪಂನಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಜಿಪಂ ಎಇಇ ಮಲ್ಲಿಕಾರ್ಜುನ ಅವಿರೋಧ ಅಯ್ಕೆಯಾಗಿದ್ದಾರೆಂದು ಘೋಷಿಸಿದರು. ಪಿಡಿಒ ಭರತ್ ಕುಮಾರ್ ಕಾರ್ಯದರ್ಶಿ ಯು.ಎಂ.ಪ್ರಕಾಶ, ರಾಜಕುಮಾರ ನಾಯ್ಕ ಇದ್ದರು.

ಪೂಜಾರಿಹಳ್ಳಿ ಗ್ರಾಪಂ: ಪೂಜಾರಿಹಳ್ಳಿ ಗ್ರಾಪಂ ಅಧ್ಯಕ್ಷೆಯಾಗಿ ಜ್ಯೋತಿ, ಉಪಾಧ್ಯಕ್ಷೆಯಾಗಿ ದುರುಗಮ್ಮ ಶುಕ್ರವಾರ ಆಯ್ಕೆಯಾದರು. 21 ಸದಸ್ಯ ಬಲದ ಪಂಚಾಯಿತಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಮತ್ತು ಸಿದ್ದನಗೌಡ, ಎಸ್ಸಿ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ದುರುಗಮ್ಮ ಮತ್ತು ಚಂದ್ರಮ್ಮ ಸ್ಪರ್ಧಿಸಿದ್ದರು.

ಜ್ಯೋತಿ 12 ಮತ, ದುರುಗಮ್ಮ 11 ಮತ ಪಡೆದು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸಿಡಿಪಿಒ ನಾಗನಗೌಡ ಪಾಟೀಲ್ ಘೋಷಿಸಿದರು. ಪಿಡಿಒ ನಾರಾಯಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net