ಯಲಬುರ್ಗಾ: ತಾಲೂಕಿನ ಕರಮುಡಿ ಗ್ರಾಮದ ಹಠಯೋಗಿ ಕೋಡಿಕೊಪ್ಪದ ಶ್ರೀ ಹುಚ್ಚೀರೇಶ್ವರ ರಥೋತ್ಸವ, ಭೀಮಾಂಬಿಕಾ ದೇವಿ ಪುರಾಣ ಮಹಾಮಂಗಲ ಮತ್ತು ಸಾಮೂಹಿಕ ವಿವಾಹಗಳು ಏ.29 ರಂದು ಜರುಗಲಿವೆ.
ಇದನ್ನೂ ಓದಿ: ಹೊಗರೇಕಾನ್ಗಿರಿಯಲ್ಲಿ ಬ್ರಹ್ಮರಥೋತ್ಸವ
28ರಂದು ಶ್ರೀ ಹುಚ್ಚೀರೇಶ್ವರ ಮತ್ತು ಭೀಮಾಂಬಿಕಾ ದೇವಿ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. 29ರಂದು ಸಾಮೂಹಿಕ ವಿವಾಹ, ಪುರಾಣ ಮಹಾಮಂಗಲ ಮತ್ತು ರಥೋತ್ಸವ ಜರುಗಲಿದೆ.
ಯಲಬುರ್ಗಾ ಸಂಸ್ಥಾನ ಹಿರೇಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ಕುಕನೂರಿನ ಅನ್ನದಾನೀಶ್ವರ ಶಾಖಾ ಮಠದ ಡಾ. ಶ್ರೀ ಮಹಾದೇವ ಸ್ವಾಮೀಜಿ, ಶಿವಯೋಗ ಮಂದಿರ ಶ್ರೀ ಚನ್ನಬಸವ ಸ್ವಾಮೀಜಿ, ರೋಣದ ಗುಲಗಂಜಿಮಠದ ಶ್ರೀ ಗುರುಪಾದ, ಭೀಮಾಂಬಿಕಾ ದೇವಿ ಮಠದ ಶ್ರೀ ಷಣ್ಮುಖಪ್ಪ ಧರ್ಮರ ಸಾನಿಧ್ಯ ವಹಿಸುವರು.
ಪ್ರವಚನಕಾರ ಪ್ರಭುದೇವ ಹಿರೇಮಠ, ಗಾಯಕ ರಂಗನಾಥ ಗವಾಯಿ, ತಬಲಾ ವಾದಕ ವೀರಣ್ಣ ಕಮ್ಮಾರ, ಸೇವಾಕಾಂಕ್ಷಿ ರುದ್ರಯ್ಯ ಕೆಂಭಾವಿಮಠ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕರವೀರಭದ್ರೇಶ್ವರ ನಾಟ್ಯ ಸಂಘದಿಂದ ‘ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ’ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.