ವಾಹನಗಳಿಗೆ ಅತಿ ಸುರಕ್ಷಿತ ನಂಬರ್ ಪ್ಲೇಟ್ ಸೂಚನೆ

Number Plate F
Published on

ಕಲಬುರಗಿ,: ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ನಿರ್ದೇಶನದಂತೆ ದಿ:01.04.2019 ಕ್ಕಿಂತ ಪೂರ್ವದಲ್ಲಿ ನೋಂದಣಿಗೊಂಡ ವಾಹನಗಳಿಗೆ ದಿ.17.11.2023 ರೊಳಗಾಗಿ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್-ಎಚ್.ಹೆಸ್.ಆರ್.ಪಿ) ಅಳವಡಿಸುವಂತೆ
ಕಲಬುರಗಿ ವಿಭಾಗದ ಉಪ ಸಾರಿಗೆ ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ‌.ನೂರ್ ಮೊಹಮ್ಮದ್ ಭಾಷಾ ತಿಳಿಸಿದ್ದಾರೆ.

ಸಾರ್ವಜನಿಕರು ತಮ್ಮ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ -ಎಚ್.ಎಸ್.ಆರ್.ಪಿ ಅಳವಡಿಸಲು ಹೆಚ್ಚಿನ ಮಾಹಿತಿಗಾಗಿ www.makemyhsrp.com ವೆಬ್‌ಸೈಟ್ ನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ನಿಗದಿತ ಅವಧಿಯೊಳಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್.ಎಸ್.ಆರ್.ಪಿ)ಗಳನ್ನು ಅಳವಡಿಸದೇ ವಾಹನಗಳು ಸಂಚರಿಸಿದ್ದು ಕಂಡುಬಂದಲ್ಲಿ ಪ್ರವರ್ತನ ಚಟುವಟಿಕೆ ಕೈಗೊಂಡು ಮೋಟಾರು ವಾಹನ ಕಾಯ್ದೆಯನುಸಾರ ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net