

ಬೆಂಗಳೂರು: ಕನ್ನಡದಲ್ಲಿ ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗ್‌ನಲ್ಲಿ ಕನ್ನಡವನ್ನು ತರಲು ಹಲವು ದಶಕಗಳು, ಸಮನ್ವಯ ಸಮಿತಿ ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘಗಳ ಸಮನ್ವಯ ಸಮಿತಿಗೆ ಮಾರ್ಗದರ್ಶನ ನೀಡಿದ ಅಂಕಣಕಾರ, ಅರ್ಥಶಾಸ ಅಧ್ಯಾಪಕ, ನಿಘಂಟು ತಜ್ಞ ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ ನೆನಪಿನ ಉತ್ಸವ ಅರ್ಥಪೂರ್ಣವಾಗಿ ಆಚರಣೆಗೊಂಡಿತು.
ನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಸ್ಥಳೀಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನವು ಗುರುವಾರ ಎಚ್ಚೆಸ್ಕೆ - ನೆನಪಿನ ಉತ್ಸವ ಆಯೋಜಿಸಿತ್ತು. ಎಸ್‌ಬಿಐ ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಕಿಶನ್ ಶರ್ಮಾ ಕಾರ್ಯಕ್ರಮ ಉದ್ಘಾಟಿಸಿದರು.
ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಕೆ. ಶಾಂತಾರಾಮ ಪೈ ಅವರು ಪ್ರತಿಷ್ಠಾನದ ಜಾಲತಾಣಕ್ಕೆ (https//:sahityadasoha.com) ಚಾಲನೆ ನೀಡಿದರು. ಎಚ್ಚೆಸ್ಕೆ ಅವರ ಸಮಗ್ರ ಕೃತಿಗಳ 7 ಆವೃತ್ತಿ ರೂಪಿಸಿ ಯುಟ್ಯೂಬ್ನಲ್ಲಿ ಪ್ರಚುರಪಡಿಸಿದ ಎಚ್.ಎಲ್. ಗುರುಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಪ್ರತಿಷ್ಠಾನದ ಅಧ್ಯಕ್ಷ ಬೆಂ. ರವೀಂದ್ರ ‘ಬ್ಯಾಂಕಿಂಗ್ ಕನ್ನಡಕ್ಕೆ ಎಚ್ಚೆಸ್ಕೆ ಕೊಡುಗೆ’ ಕುರಿತು ಮಾತನಾಡಿದರು. ವಿವಿಧ ವಿಷಯಗಳ ಎಸ್‌ಬಿಐ ನಿವೃತ್ತ ಉಪ ಪ್ರಧಾನ ವ್ಯವಸ್ಥಾಪಕ ಎಚ್. ಶ್ರೀಧರ ರಾವ್, ಎಸ್. ಧೀರೇಂದ್ರ ಕುರಿತು ತಜ್ಞರು ವಿಚಾರ ಮಂಡಿಸಿದರು. ಕವಿಗೋಷ್ಠಿಯೂ ನಡೆಯಿತು.
ಕಾರ್ಯಕ್ರಮದಲ್ಲಿ ಗಿರಿರಾಜ್, ಕೆ.ಎನ್.ಮಹಾಬಲ, ರವಿ ಕುಸುಬಿ, ಹು.ವಾ. ಪ್ರಕಾಶ್, ಶ್ರೀರಂಗರಾಜನ್ ಇತರರು ಇದ್ದರು.