

ಬೆಂಗಳೂರು : ರಾಜ್ಯದಲ್ಲಿ ಒತ್ತುವರಿಯಾಗಿರುವ 328 ದೇವಾಲಯಗಳ ಆಸ್ತಿಗಳನ್ನು ಸಂರಕ್ಷಿಸಲು ಕ್ರಮ. ಭೂ-ವರಾಹ ಯೋಜನೆಯಡಿ ದೇವಾಲಯಗಳ ಸ್ಥಿರಾಸ್ತಿ ದಾಖಲೀಕರಣ. ಧಾರ್ಮಿಕ ದತ್ತಿ ದೇವಾಲಯಗಳ 25 ಸಾವಿರ ಅರ್ಚಕರ ವಾರ್ಷಿಕ ತಸ್ತೀಕ್ ಮೊತ್ತ 72 ಸಾವಿರಕ್ಕೆ ಏರಿಕೆ
ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ/ನೌಕರರ ವೇತನವನ್ನು ದೇವಾಲಯ ನಿಧಿಯ ಬದಲಾಗಿ ಸರ್ಕಾರದಿಂದ ಪಾವತಿಸಲು ನಿರ್ಧಾರ.
ರಾಜ್ಯ ಮತ್ತು ಹೊರರಾಜ್ಯದ 400 ದೇವಾಲಯದ ಛತ್ರಗಳಲ್ಲಿರುವ ಕೊಠಡಿಗಳ ಮೂಲಭೂತ ಸೌಲಭ್ಯ, ಕೊಠಡಿ ಕಾಯ್ದಿರಿಸುವಿಕೆ ಹಾಗೂ ನಿರ್ವಹಣೆಗೆ ನೂತನ ಕೋಶ ಸ್ಥಾಪನೆ. ಚಂದ್ರಗುತ್ತಿ ಗ್ರಾಮವನ್ನು ಧಾರ್ಮಿಕ ಹಾಗೂ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರ ರಚನೆ.
ಜೈನ ಅರ್ಚಕರು, ಸಿಖ್ಖ್ ಮುಖ್ಯಗ್ರಂಥಿಗಳು, ಮಸೀದಿಗಳ ಪೇಷ್ ಇಮಾಮ್ ಗಳಿಗೆ ನೀಡುತ್ತಿರುವ ಮಾಸಿಕ ಗೌರವಧನವನ್ನು 6,000 ರೂ. ಗಳಿಗೆ ಹೆಚ್ಚಿಸಲಾಗಿದೆ.