ಸಿಎಂ ಸಿದ್ಧರಾಮಯ್ಯ ಬಜೆಟ್​ನಲ್ಲಿ ಯುವಸಬಲೀಕರಣಕ್ಕೆ ಒತ್ತು, ಕ್ರೀಡಾಪಡುಗಳಿಗೆ ಬಂತು ತಾಕತ್ತು

cm
Published on

ಬೆಂಗಳೂರು: ದೇಶದ ಭವಿಷ್ಯ ಮತ್ತು ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಯುವ ಜನತೆಗೆ ಮೀಸಲಾಗಿರುವ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬಜೆಟ್ ಸಂದರ್ಭದಲ್ಲಿ ಆದ್ಯತೆಗಿಂತ ತಾತ್ಸಾರಕ್ಕೆ ಒಳಗಾಗುವುದೇ ಹೆಚ್ಚು. ಅಂತಹ ಯುವ ಸಮುದಾಯದ ಅಭಿವೃದ್ಧಿ ಮತ್ತು ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಕೆಲ ಹೊಸ ಯೋಜನೆಗಳನ್ನು ೋಷಿಸಿದ್ದಾರೆ.

ಗುರಿಒಲಿಂಪಿಕ್ ಪದಕ ಯೋಜನೆಯಡಿ ರಾಜ್ಯದ ಪ್ರತಿಭಾನ್ವಿತ 60 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ 2028ರ ಒಲಂಪಿಕ್ಸ್ ತಯಾರಿಗೆ ವಾರ್ಷಿಕ ತಲಾ 10 ಲಕ್ಷ ರೂ ಪ್ರೋತ್ಸಾಹ ಧನ ಮೂರು ವರ್ಷ ನೀಡಲಾಗುವುದು. ಈ ಪೈಕಿ ಪ್ರಸಕ್ತ ಸಾಲಿನ 6 ಕೋಟಿ ರೂ. ಒದಗಿಸಲಾಗಿದೆ.

ಬೆಂಗಳೂರು ಗ್ರಾ. ಜಿಲ್ಲೆಯ ಆದಿನಾರಾಯಣ ಹೊಸಹಳ್ಳಿಯಲ್ಲಿ 20 ಎಕರೆ ನಿವೇಶನದಲ್ಲಿ ಜಿಲ್ಲಾ ಕ್ರೀಡಾಂಗಣ ಹಾಗೂ ಸೈಕ್ಲಿಂಗ್ ಕ್ರೀಡೆಗೆ ಉತ್ತೇಜನ ನೀಡಲು 5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಾಣ. ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ತಲಾ 3 ಕೋಟಿ ರೂ ೋಷಣೆ.

ಯಲಬುರ್ಗಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲ್ಲೂಕು ಕ್ರೀಡಾಂಗಣ ಹಾಗೂ ಟಿ.ನರಸೀಪುರ ತಾಲ್ಲೂಕು ಕ್ರೀಡಾಂಗಣವನ್ನು 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ. ರಾಜ್ಯದ ನಾಲ್ಕು ವಿಭಾಗಗಳ ಜಿಲ್ಲಾ ಕ್ರೀಡಾಂಗಣಗಳಲ್ಲಿ ಶೂಟಿಂಗ್ ರೇಂಜ್ಗಳ ನಿರ್ಮಾಣಕ್ಕೆ ಮುಂದಿನ ಮೂರು ವರ್ಷಗಳಲ್ಲಿ 3 ಕೋಟಿ ಅನುದಾನ. ಅರಣ್ಯಾಧಾರಿತ ಬುಡಕಟ್ಟು ವರ್ಗದವರಿಗೆ ಪ್ರತಿವರ್ಷ ಕ್ರೀಡಾಕೂಟ ಆಯೋಜಿಸಲು 2 ಕೋಟಿ ರೂ. ಅನುದಾನ. ಕೂಡಿಗೆ ಕ್ರೀಡಾ ಶಾಲೆಯ ಉನ್ನತೀಕರಣಕ್ಕೆ 3 ಕೋಟಿ, ಶಹಾಪುರದಲ್ಲಿ ಸುಸಜ್ಜಿತ ಕ್ರೀಡಾ ವಸತಿ ಶಾಲೆ ಸ್ಥಾಪನೆಗೆ 10 ಕೋಟಿ, ಮೈಸೂರು ಮತ್ತು ಬೆಳಗಾವಿಯಲ್ಲಿ ಕ್ರೀಡಾ ವಿಜ್ಞಾನ ಕೇಂದ್ರಗಳನ್ನು ತೆರೆಯಲು 7 ಕೋಟಿ, ಚಾಮರಾಜನಗರದಲ್ಲಿ ಒಲಂಪಿಕ್ಸೃ್ ಮಾದರಿಯ ಈಜುಕೊಳ ನಿರ್ಮಾಕ್ಕೆ 2 ಕೋಟಿ, ಮೈಸೂರಿನಲ್ಲಿ ಕುಸ್ತಿ, ವಾಲಿಬಾಲ್, ಖೋಖೋ ಅಕಾಡೆಮಿ ಸ್ಥಾಪಿಸಲು 2 ಕೋಟಿ, ಉದ್ಯೋಗ ಖಾತರಿ ಯೋಜನೆಯಡಿ 100 ಶಾಲೆಗಳ ಆಟದ ಮೈದಾನ ನಿರ್ಮಾಣಕ್ಕೆ ತಲಾ 5 ಲಕ್ಷ ರೂ. ೋಷಿಸಲಾಗಿದೆ.

* 12 ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ತಲಾ 2 ಕೋಟಿ ಮೀಸಲು.

* ಕಂಬಳ, ಎತ್ತಿನಬಂಡಿ ಓಟ ಮತ್ತು ಮಲ್ಲಕಂಭ ಕ್ರೀಡೆಗಳಿಗೆ ಉತ್ತೇಜನ.

* ಬೆಂಗಳೂರು ವಿದ್ಯಾನಗರದ ಈಜುಕೊಳವನ್ನು ಹೀಟಿಂಗ್ ಮತ್ತು ಡೈವಿಂಗ್ ಪೂಲಾಗಿ ಮೇಲ್ದರ್ಜೆಗೆ.

* ಕ್ರೀಡಾಪಟುಗಳ ಶಾಲಾ ವಾರ್ಷಿಕ ಹಾಜರಾತಿಯಲ್ಲಿ ವಿನಾಯಿತಿ.

* ಪದಕ ವಿಜೇತ ಕ್ರೀಡಾಪಟುಗಳಿಗೆ ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಶೇ.5 ಕೃಪಾಂಕ.

* ನಿವೃತ್ತ ಕುಸ್ತಿಪಟುಗಳ ಮಾಸಾಶನ ಏರಿಕೆ.

* ಒಲಂಪಿಕ್ಸ್, ಕಾಮನ್ ವೆಲ್ತ್, ಏಷಿಯನ್ ಗೇಮ್ಸ್ ಪದಕ ವಿಜೇತ ಕ್ರೀಡಾಪಟುಗಳ ಮಾರ್ಗದರ್ಶನ ಬಳಸಿಕೊಳ್ಳಲು ಕ್ರಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net