

ಮಾಗಡಿ: ನೆಲಮಂಗಲ ತಾಲೂಕಿಗೆ ಸೋಲೂರು ಹೋಬಳಿ ಸೇರ್ಪಡೆ ಅಧಿಸೂಚನೆ ಬೆನ್ನಲ್ಲೇ ಮಾಗಡಿ ತಾಲೂಕಿನಲ್ಲಿ ಆದೇಶದ ವಿರುದ್ಧ ಹೋರಾಟದ ಸ್ವರೂಪ ದಿನೇದಿನೆ ಹೆಚ್ಚುತ್ತಿದೆ.
ನಾಡಪ್ರಭು ಕೆಂಪೇಗೌಡರು ಮಾಗಡಿಯ ಭೂ ಭಾಗವನ್ನು ಶಿವಗಂಗೆಯಿಂದ ಮಂಡ್ಯದವರೆಗೂ ವಿಸ್ತರಿಸಿದ್ದರು. ಆದರೆ, ಇಲ್ಲಿನ ಶಾಸಕರು ಕೆಂಪೇಗೌಡರ ಆಳ್ವಿಕೆಯ ಭೂಭಾಗ ಬೇರೆ ಜಿಲ್ಲೆಗಳಿಗೆ ಸೇರ್ಪಡೆಯಾಗುತ್ತಿದ್ದರೂ ನೋಡಿಕೊಂಡು ಕೂತಿದ್ದಾರೆ ಎಂದು ಪಟ್ಟಣದಲ್ಲಿ ಭಾನುವಾರ ರೈತರು, ಕನ್ನಡ ಮತ್ತು ದಲಿತ ಸಂಟನೆಗಳ ಪ್ರಮುಖರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಸರ್ಕಾರದ ಆದೇಶ ಖಂಡಿಸಿ ಕಂದಾಯ ಇಲಾಖೆಗೆ ಮನವಿ, ಕಾನೂನು ಹೋರಾಟದೊಂದಿಗೆ ರಾಜ್ಯಪಾಲರ ಭೇಟಿಗೂ ರ್ನಿಣಯಿಸಿದರು.
ತಾಲೂಕು ಟಿಎಪಿಎಂಸಿಎಸ್ ಅಧ್ಯಕ್ಷ ಎಚ್.ಆರ್.ಶಿವಪ್ರಸಾದ್ ಮಾತನಾಡಿ, ಸೋಲೂರು ಹೋಬಳಿಯ ಸಹಕಾರ ಸಂ, ಡೇರಿ ಹಾಗೂ ಶಿಕ್ಷಣ ಸಂಸ್ಥೆಗಳೆಲ್ಲವನ್ನೂ ನೆಲಮಂಗಲಕ್ಕೆ ಸೇರಿಸಿದರೆ ಮಾಗಡಿ ಚಿಕ್ಕ ತಾಲೂಕಾಗಲಿದೆ. ಈಗ ಸೋಲೂರಿನ ಜನರಿಗೆ ಸಮಸ್ಯೆಯಾಗುತ್ತದೆಂದು ನೆಲಮಂಗಲಕ್ಕೆ ಸೇರಿಸಿದಂತೆ ಮಾಗಡಿ ತಾಲೂಕು ಕೇಂದ್ರ 30 ಕಿಮೀ, ರಾಮನಗರ ಜಿಲ್ಲಾ ಕೇಂದ್ರ 65 ಕಿಮೀ ದೂರವಿದೆ. ಆದರೆ, ಕುಣಿಗಲ್ ಕೇವಲ 8 ಕಿಮೀ, ತುಮಕೂರು 30 ಕಿಮೀ ಅಂತರದಲ್ಲಿದ್ದು ನಮ್ಮನ್ನು ತುಮಕೂರು ಜಿಲ್ಲೆಗೆ ಸೇರಿಸಿ ಎಂದು ತಿಪ್ಪಸಂದ್ರ ಹೋಬಳಿ ಜನ ಕೇಳಿದರೆ ಏನು ಮಾಡುತ್ತೀರಿ?. ಸೋಲೂರನ್ನು ಮಾಗಡಿಯಲ್ಲೇ ಉಳಿಸಿಕೊಳ್ಳಲು ಕಾನೂನು ಹೋರಾಟ ಮಾಡಲಾಗುವುದು ಎಂದರು.
ತಾಪಂ ಮಾಜಿ ಸದಸ್ಯ ಸಿ.ಜಯರಾಮು ಮಾತನಾಡಿ, ಸೋಲೂರಿನಂತೆ ಬೇರೆ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳಿಗೆ ಮತ ಚಲಾಯಿಸುವ 130ಕ್ಕೂ ಹೆಚ್ಚು ಹೋಬಳಿಗಳು ರಾಜ್ಯದಲ್ಲಿವೆ. ಆದರೆ ಸೋಲೂರನ್ನು ಮಾತ್ರ ಮಾಗಡಿಯಿಂದ ಬೇರ್ಪಡಿಸುವುದೇಕೆ ಎಂದು ಪ್ರಶ್ನಿಸಿದರು.
ಆದಾಯದ ಮೂಲವಾಗಿರುವ ಸೋಲೂರು ಹೋಬಳಿಯನ್ನು ತಾಲೂಕಿನಿಂದ ಬೇರ್ಪಡಿಸಿದರೆ ಮಾಗಡಿಗೆ ಅನುದಾನದಲ್ಲಿ ಕಡಿತವಾಗಲಿದ್ದು, ಮಾಗಡಿ ಶಾಸಕರು ಜವಾಬ್ದಾರಿ ಅರಿತು ತಾಲೂಕಿನ ಭೂಭಾಗವನ್ನು ರಸಿಕೊಳ್ಳಬೇಕು ಎಂದರು.
ಕರ್ನಾಟಕ ನವ ನಿರ್ಮಾಣ ವೇದಿಕೆ ಅಧ್ಯಕ್ಷ ರಾಜಣ್ಣ, ಗೌರವಾಧ್ಯಕ್ಷ ಮಹಾಂತೇಶ್, ರಾಜ್ಯ ಉಪಾಧ್ಯಕ್ಷ ಆಗ್ರೋ ಪುರುಷೋತ್ತಮ್, ಕೆಂಪೇಗೌಡ ರೈತಸಂಟನೆ ಅಧ್ಯಕ್ಷ ಬಾಳೆನಹಳ್ಳಿ ಶಿವಣ್ಣ, ರಾಜ್ಯ ಯುವ ಟಕ ಅಧ್ಯಕ್ಷ ಜಟ್ಟನಹಳ್ಳಿ ದಿನೇಶ್, ಗೋಸಂರಕ್ಷಣಾ ವೇದಿಕೆ ಅಧ್ಯಕ್ಷ ಶಿವಕುಮಾರು, ಗೊಲ್ಲಹಳ್ಳಿ ರಾಜಣ್ಣ, ಸೋಮಶೇಖರ್, ರೈತಸಂದ ಮುಖಂಡರಾದ ಬುಡಾನ್ ಸಾಬ್, ಶಿವಲಿಂಗಯ್ಯ, ರಾಮಣ್ಣ, ಶಿವರುದ್ರಯ್ಯ, ನಾಗರಾಜಯ್ಯ, ರವಿಕುಮಾರು ಇದ್ದರು.