ಸಿದ್ದಗಂಗಾ ಮಠಕ್ಕೆ ಅನುದಾನ ತಡೆ ಸಿಎಂ ಗಮನಕ್ಕೆ ತರುವೆ: ಜಮೀರ್ ಅಹ್ಮದ್

Zameer_Mutt
Published on

ತುಮಕೂರು: ಸಿದ್ದಗಂಗಾ ಮಠಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನು ಸರ್ಕಾರ ತಡೆಹಿಡಿದಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ಗಮನಕ್ಕೆ ತರುತ್ತೇನೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಹೇಳಿದರು.

ನೂತನ ಸಚಿವರಾದ ಬಳಿಕ ಮಂಗಳವಾರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೊದಲ ಆದ್ಯತೆ ಶಿಕ್ಷಣಕ್ಕೆ ಕೊಡಲಾಗುವುದು. ತ್ರಿವಿಧ ದಾಸೋಹ ಕೇಂದ್ರವಾದ ಸಿದ್ದಗಂಗೆಯಲ್ಲಿ 10 ಸಾವಿರಕ್ಕು ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಈ ಬಾರಿ ಇನ್ನೂ ಹೆಚ್ಚಿನ ಮಕ್ಕಳು ಮಠಕ್ಕೆ ಅರ್ಜಿಸಲ್ಲಿಸಿದ್ದು ಅಗತ್ಯ ಕಟ್ಟಡ ನಿರ್ಮಾಣಕ್ಕೆ ನೆರವು ನೀಡಲಾಗುವುದು. ಅನುದಾನ ತಡೆಹಿಡಿದಿರುವ ಬಗ್ಗೆ ಶ್ರೀಗಳ ಜತೆ ಚರ್ಚೆ ಮಾಡಿಲ್ಲ. ಮಠದ ಅನನ್ಯ ಸೇವೆ ಎಲ್ಲರಿಗೂ ಗೊತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net