

ವಿಜಯವಾಣಿ ವಿಶೇಷ ಹಾವೇರಿ
ವಿವಿಧ ಕೆಲಸಗಳಿಗೆ ಜಿಲ್ಲೆಗೆ ಬಂದು ಲಾಕ್ಡೌನ್ನಿಂದ ಮರಳಿ ಊರಿಗೆ ಹೋಗಲಾಗದೇ ಸಿಲುಕಿ ರುವ ಅಸಂಘಟಿತ, ವಲಸೆ ಕಾರ್ವಿುಕರಿಗೆ ಊಟ ಮತ್ತು ವಸತಿ ಸಮಸ್ಯೆ ನಿವಾರಿಸಲು ಜಿಲ್ಲಾಡಳಿತ ವಿವಿಧೆಡೆ ವಸತಿ, ಊಟದ ವ್ಯವಸ್ಥೆ ಕಲ್ಪಿಸಿದೆ.
ಜಿಲ್ಲೆಯಲ್ಲಿ ಈವರೆಗೆ 480 ಅಸಂಘಟಿತ ಹಾಗೂ ವಲಸೆ ಕಾರ್ವಿುಕರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಿ ಊಟ, ಉಪಾಹಾರದ ವ್ಯವಸ್ಥೆ ಕೈಗೊಳ್ಳಲಾಗಿದೆ. ಜಿಲ್ಲಾ ಕಾರ್ವಿುಕ ಇಲಾಖೆಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ವಲಸೆ ಕಾರ್ವಿುಕರು ಹಾಗೂ ಸ್ಥಳೀಯವಾಗಿ ಹೋಟೆಲ್, ಪಾನ್ಶಾಪ್, ಸಣ್ಣಸಣ್ಣ ಗೂಡಂಗಡಿಗಳಲ್ಲಿ ಕೆಲಸ ಮಾಡಲು ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ವಲಸೆ ಬಂದು ಇಲ್ಲಿಯೇ ಉಳಿದಿರುವ ಕಾರ್ವಿುಕರೆಲ್ಲರನ್ನೂ ಕರೆತಂದು ಊಟದ ವ್ಯವಸ್ಥೆ ಮಾಡಲಾಗಿದೆ.
ಹಾವೇರಿ ಉಪವಿಭಾಗದಲ್ಲಿ 366 ಜನರಿಗೆ ಹಾಗೂ ಸವಣೂರು ಉಪವಿಭಾಗದಲ್ಲಿ 68 ಜನರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರದ ಕಾರ್ವಿುಕರು ಹುಬ್ಬಳ್ಳಿಯಲ್ಲಿ ಸಿಲುಕಿ ಬೆಂಗಳೂರಿಗೆ ಹಿಂತಿರುಗುತ್ತಿದ್ದ 44 ಜನರು ಸವಣೂರಿನಲ್ಲಿ ಮಂಗಳವಾರ ಬೆಳಗ್ಗೆ ಊಟಕ್ಕೆ ಪರದಾಡುತ್ತಿದ್ದರು. ಇವರನ್ನು ಸವಣೂರಿನ ಸಮಾಜಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯದಲ್ಲಿ ಉಳಿಸಿ ಊಟದ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.
ಹೊರ ರಾಜ್ಯದ ವಿದ್ಯಾರ್ಥಿಗಳಿಗೂ ವ್ಯವಸ್ಥೆ: ನಗರದ ಆಯುಷ್ ಕಾಲೇಜ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ಗುಜರಾತ್ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ಮಂಗಳವಾರ ಬೆಳಗ್ಗೆ ಆಡಳಿತ ಸಂಸ್ಥೆಯನ್ನು ಸಂರ್ಪಸಿ ಕಾಲೇಜ್ನಲ್ಲಿ ಮೆಸ್ ಆರಂಭಿಸಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಬೇರೆ ಜಿಲ್ಲೆಯಲ್ಲಿ ಸಿಲುಕಿದರಿಗೂ ಊಟ, ವಸತಿ: ಕಾರ್ಕಳದ ಬೈಲೂರಿನಲ್ಲಿ ಕೆಲಸ ಮಾಡುತ್ತಿದ್ದ ಜಿಲ್ಲೆಯ 35 ಜನ ಹಾಗೂ ಹತ್ತೂರ ಚರ್ಚ್ ಬಳಿ ಕೆಲಸ ಮಾಡುತ್ತಿದ್ದ ಗರ್ಭಿಣಿ ಸೇರಿ 45 ಜನರಿಗೆ, ತುಮಕೂರು ಜಿಲ್ಲೆ ತಿಪಟೂರ ತಾಲೂಕು ನೋಣಗಿನಕೆರೆಯಲ್ಲಿ ವಿದ್ಯಾಭ್ಯಾಸಕ್ಕೆ ಹೋಗಿದ್ದ ಹಾವೇರಿಯ ಇಬ್ಬರು ವಿದ್ಯಾರ್ಥಿಗಳಿಗೆ ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಅಲ್ಲಿನ ಸ್ಥಳೀಯ ಆಡಳಿತದ ಅಧಿಕಾರಿಗಳೊಂದಿಗೆ ರ್ಚಚಿಸಿ ಊಟ ಹಾಗೂ ವಸತಿ ವ್ಯವಸ್ಥೆ ಮಾಡಿದ್ದಾರೆ.
ತಹಸೀಲ್ದಾರ್ ಭೇಟಿ: ಹಾವೇರಿಯ ವಸತಿ ನಿಲಯದಲ್ಲಿ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿರುವ ಸ್ಥಳಕ್ಕೆ ಬುಧವಾರ ತಹಸೀಲ್ದಾರ್ ಶಂಕರ ಜಿ.ಎಸ್., ಭೇಟಿ ನೀಡಿ ಅಡುಗೆ ಸಿದ್ಧತೆಯ ಕೋಣೆ ಪರಿಶೀಲಿಸಿದರು. ಈಗಾಗಲೇ ಎಲ್ಲರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಸಮಸ್ಯೆಯಾದರೆ ಕೂಡಲೆ ಜಿಲ್ಲಾಸ್ಪತ್ರೆಗೆ ಕಳಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ವಲಸಿಗ ಕಾರ್ವಿುಕರಿಗೆ ಯಾವುದೇ ತೊಂದರೆಯಾದಲ್ಲಿ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಕಾರ್ವಿುಕ ಅಧಿಕಾರಿ ಕಲಾವತಿ ಸಾತೇನಹಳ್ಳಿ (9481725864)ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ವಲಸೆ ಕಾರ್ವಿುಕರಿಗೆ ಊಟ ಮತ್ತು ವಸತಿಯ ಸಮಸ್ಯೆ ಉಂಟಾದಲ್ಲಿ ಜಿಲ್ಲಾಡಳಿತ ಸ್ಥಾಪಿಸಿರುವ ನಿಯಯಂತ್ರಣ ಕೊಠಡಿಯ ಉಚಿತ ಸಹಾಯವಾಣಿ ಸಂಖ್ಯೆ: 08375-249102/ 249103/249104 ಮಾಹಿತಿ ನೀಡಬೇಕು. ತಕ್ಷಣ ಅವರಿಗೆ ಊಟ, ವಸತಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು.| ಎಂ. ಯೋಗೇಶ್ವರ ಅಪರ ಜಿಲ್ಲಾಧಿಕಾರಿ ಹಾವೇರಿ
EndFragment