ನಗರದ ನಿವೇಶನರಹಿತರಿಗೆ ವಸತಿ

FotoJet (7)
Published on

 ಕಂದಾಯ, ನಗರಸಭೆಯಿಂದ ಸ್ಥಳ ಪರಿಶೀಲನೆ, ಸರ್ವೇ | 2 ಸಾವಿರ ಮಂದಿಗೆ ಸೂರು ಕಲ್ಪಿಸುವ ಗುರಿ

ಗೌರಿಬಿದನೂರು: ನಗರದ ನಿವೇಶನರಹಿತರಿಗೆ ವಸತಿ ಸೌಕರ್ಯ ಕಲ್ಪಿಸುವ ಉದ್ದೇಶಕ್ಕಾಗಿ ನಗರದ ಹೊರವಲಯದಲ್ಲಿ ಸುಮಾರು 50 ಎಕರೆ ಜಮೀನನ್ನು ಕಂದಾಯ ಮತ್ತು ನಗರಸಭೆ ಅಧಿಕಾರಿಗಳು ಗುರುವಾರ ಜಂಟಿ ಸರ್ವೇ ಹಾಗೂ ವೀಕ್ಷಣೆ ಮಾಡಿದರು.

ತಹಶೀಲ್ದಾರ್ ಮಹೇಶ್ ಎಸ್. ಪತ್ರಿ, ನಗರಸಭಾಧ್ಯಕ್ಷ ಲಕ್ಷ್ಮೀನಾರಾಯಣ್, ಸದಸ್ಯರಾದ ಖಲೀಂಉಲ್ಲಾ, ಡಿ.ಜೆ.ಚಂದ್ರಮೋಹನ್, ಕಂದಾಯ ಅಧಿಕಾರಿ ಖಾದರ್ ಅಲ್ಲದೆ 20ಕ್ಕೂ ಹೆಚ್ಚು ಕಂದಾಯ ಇಲಾಖೆ ಸಿಬ್ಬಂದಿ ಸಾಗಾನಹಳ್ಳಿ, ಕಲ್ಲೂಡಿ, ಚೀಗಟಗೆರೆ ಸೇರಿ ಹಲವೆಡೆ ಜಮೀನು ವೀಕ್ಷಣೆ ಹಾಗೂ ಸರ್ವೇ ಸಿಬ್ಬಂದಿಯಿಂದ ವ್ಯಾಪ್ತಿ ನಿಗದಿಪಡಿಸುವ ಕಾರ್ಯ ನಡೆಯಿತು.

ನಗರ ಪ್ರದೇಶದ ಸುಮಾರು 2 ಸಾವಿರ ನಿವೇಶನರಹಿತರಿಗೆ ವಸತಿ ಸೌಕರ್ಯ ಕಲ್ಪಿಸಬೇಕೆಂಬ ಉದ್ದೇಶ ಇರುವುದಾಗಿ ತಿಳಿಸಿದ ನಗರಸಭಾಧ್ಯಕ್ಷ ಲಕ್ಷ್ಮೀನಾರಾಯಣ್, ಇದೊಂದು ಕ್ರಾಂತಿಕಾರಿ ಬೆಳವಣಿಗೆ ಎಂದರು.

ಕಾದಲವೇಣಿ ಭಾಗದಲ್ಲೂ ವಸತಿರಹಿತರಿಗೆ ನಿವೇಶನ ನೀಡಲಿದ್ದು ಇಡೀ ಗೌರಿಬಿದನೂರು ನಗರದಲ್ಲಿ ಪ್ರತಿಯೋರ್ವರಿಗೂ ಸೂರು ಕಲ್ಪಿಸುವ ಗುರಿ ಹೊತ್ತಿರುವ ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡ ಸಾರಥ್ಯದಲ್ಲಿ ಈ ಪ್ರಕ್ರಿಯೆ ಯಶಸ್ವಿಗೊಳಿಸುವುದಾಗಿ ಸದಸ್ಯರಾದ ಕಲೀಂ ಉಲ್ಲಾ ಮತ್ತು ಡಿ.ಜೆ.ಚಂದ್ರಮೋಹನ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net