

ಕಲಬುರಗಿ ನಗರದ ರಿಂಗ್‌ರೋಡ್‌ನಲ್ಲಿರುವ ಲಂಗರ ಹನುಮಾನ ನಗರದ ಮರಗಮ್ಮ ಗುಡಿ ಹತ್ತಿರದಲ್ಲಿರುವ ಸಂತೋಷ ಗುತ್ತೇದಾರ ಎಂಬುವರ ಮನೆಯ ಇಟ್ಟಿಗೆ ಗೋಡೆ ಒಡೆದು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಕಳವು ಮಾಡಲಾಗಿದೆ. ಗೋಡೆ ಒಡೆದು ನುಗ್ಗಿದ ಕಳ್ಳರು ೫ ಗ್ರಾಂ ಚಿನ್ನದ ಸರ, ೩ ಗ್ರಾಂ ರಿಂಗ್ ಮತ್ತು ೨೦ ಸಾ.ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಕುರಿತು ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--