

ವಿಜಯವಾಣಿ ಸುದ್ದಿಜಾಲ ಕಲಬುರಗಿ
ದಸರಾ ಹಬ್ಬಕ್ಕೆ ಊರಿಗೆ ಹೋಗಿದ್ದ ಇಲ್ಲಿನ ನ್ಯೂ ರಾಘವೇಂದ್ರ ನಗರದ ಬಳಿಯಿರುವ ಬಾಳಿ ಲೇ ಔಟ್‌ನಲ್ಲಿ ಮನೆಯೊಂದರ ಬೀಗ ಮುರಿದು ೧೦೨ ಗ್ರಾಂ ಚಿನ್ನಾಭರಣ, ನಗದು, ಬೆಳ್ಳಿಯ ಸಾಮಾನುಗಳನ್ನು ಕಳವು ಮಾಡಲಾಗಿದೆ.
ಚಿತ್ತಾಪುರ ತಾಲೂಕಿನ ಯರಗಲ್ ಗ್ರಾಮದ ಸುರೇಶ ಕುಲಕರ್ಣಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ನಗರದ ಬಾಳಿ ಲೇ ಔಟ್‌ನಲ್ಲಿ ಮನೆ ಮಾಡಿಕೊಂಡಿದ್ದರು. ದಸರಾ ಹಬ್ಬದ ನಿಮಿತ್ತವಾಗಿ ಪತ್ನಿ ಸೇರಿ ಮನೆಯವರೆಲ್ಲರು ಅ.೨೨ರಂದು ಊರಿಗೆ ಹೋಗಿದ್ದರು. ಗುರುವಾರ ಮರಳಿ ಬಂದಾಗ ಕಳವು ಆಗಿರುವುದು ಬೆಳಕಿಗೆ ಬಂದಿದೆ.
ಮನೆಯ ಬೀಗ ಮುರಿದು ಸರ,ಪಾಟಲಿ, ಕಿವಿಯೊಲೆ ಸೇರಿದಂತೆ ೧೦೨ಗ್ರಾಂ ಚಿನ್ನಾಭರಣಗಳನ್ನು, ಬೆಳ್ಳಿಯ ತಟ್ಟೆ, ಬಟ್ಟಲು ಇನ್ನಿತರ ವಸ್ತುಗಳನ್ನು ಹಾಗೂ ೨೫ ಸಾ.ರೂ.ನಗದು ಸೇರಿದಂತೆ ಒಟ್ಟು ೩.೮೦ ಲಕ್ಷ ಮೌಲ್ಯದ ನಗ-ನಾಣ್ಯ ಕಳವು ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದರು. ಆರ್‌ಜಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.