ಓನರ್​ ಮನೆಗೆ ಕನ್ನ ಹಾಕಿದ್ದ ಬಿಎಂಟಿಸಿ ಮೆಕ್ಯಾನಿಕ್​

House_Theft
Published on

ತುಮಕೂರು: ಓನರ್​ ಮನೆಗೆ ಕನ್ನ ಹಾಕಿದ್ದ ಬಿಎಂಟಿಎಸ್​ ಮೆಕ್ಯಾನಿಕ್​ನನ್ನು ತಿಲಕ್​ಪಾರ್ಕ್​ ಪೊಲೀಸರು ಬಂಧಿಸಿದ್ದಾರೆ.

ಜಯನಗರ ಠಾಣೆ ವ್ಯಾಪ್ತಿಯ ಅಮರಜ್ಯೋತಿನಗರದ ರಾಮಕೃಷ್ಣ ಆಶ್ರಮದ ಹಿಂಭಾಗದ ಬಾಡಿಗೆ ಮನೆಯಲ್ಲಿ ವಾಸವಿದ್ದ ಹರಿಶಿನಕುಂಟೆ ಡಿಪೋದಲ್ಲಿ ಬಿಎಂಟಿಸಿ ಮೆಕ್ಯಾನಿಕ್​ ಪಿ.ಎಸ್​.ಶ್ರೀನಾಥ್​ (39) ಹಾಗೂ ಶಾರದಾದೇವಿನಗರದ ನಿರ್ವಾಣಿ ಲೇಔಟ್​ ನಿವಾಸಿ ೋಟೋಗ್ರಾರ್​ ವರುಣ್​ (27) ಬಂಧಿತ ಮನೆಗಳ್ಳರು.

ಆರೋಪಿ ಶ್ರೀನಾಥ್​ ತಾನು ಬಾಡಿಗೆಗಿದ್ದ ಮನೆ ಓನರ್​ ಮನೆಗೆ ಜೂ.3 ರಂದು ಸಂಜೆ 4.30ರಲ್ಲಿ ಯಾರು ಇಲ್ಲದ ವೇಳೆ ಕಿಟಕಿ ಹೊಡೆದು ಒಳನುಗ್ಗಿ 36,92,000 ರೂ., ಮೌಲ್ಯದ 615 ಗ್ರಾಂ ಚಿನ್ನಾಭರಣ, 4.22 ಲಕ್ಷ ರೂ., ಮೌಲ್ಯದ ಬೆಳ್ಳಿ ಆಭರಣಗಳನ್ನು ದೋಚಿದ್ದರು.

ಈ ಆರೋಪಿಗಳು ವಿಚಾರಣೆ ವೇಳೆ ಜಯನಗರ ಠಾಣೆ ವ್ಯಾಪ್ತಿಯಲ್ಲಿ 3.60 ಲಕ್ಷ ರೂ., ಮೌಲ್ಯದ 60 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ 30 ಸಾವಿರ ಬೆಲೆಬಾಳುವ ಪಲ್ಸರ್​ ಬೈಕ್​ ಕದ್ದಿದ್ದನ್ನು ಬಾಯಿಬಿಟ್ಟಿದ್ದರು. ತಿಲಕ್​ಪಾರ್ಕ್​ ಸಿಪಿಐ ಜಿ.ಪುರುಷೋತ್ತಮ್​, ಜಯನಗರ ಠಾಣೆ ಪಿಎಸ್​ಐ ಎಚ್​.ಎನ್​.ಮಹಾಲಕ್ಷ$್ಮಮ್ಮ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net