

ಚಿಕ್ಕಬಳ್ಳಾಪುರ: ಬಾಡಿಗೆದಾರನೊಂದಿಗೆ ನಡೆದ ಗಲಾಟೆಯಲ್ಲಿ ಮನೆ ಮಾಲೀಕನಗೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿನಗರದ ಎನ್.ಆರ್.ಬಡಾವಣೆ ನಿವಾಸಿ ಶಂಕರಾಚಾರಿ (61) ಸಾವಿಗೀಡಾದ ಮನೆ ಮಾಲೀಕ.
ಶಂಕರಾಚಾರಿಯ ಮನೆಯಲ್ಲಿ ಬಾಡಿಗೆದಾರರಾಗಿರುವ ನಾರಾಯಣಸ್ವಾಮಿ ಮತ್ತು ಅರುಣಾ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ದಂಪತಿ ಹಾಗೂ ಮನೆ ಮಾಲೀಕರ ನಡುವೆ ನಿನ್ನೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆಗಿತ್ತು.
ಗಲಾಟೆ ವೇಳೆ ನಡೆದ ನೂಕಾಟದಲ್ಲಿ ಬಿದ್ದ ಮನೆ ಮಾಲೀಕನ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದ ಕಾರಣ ಇಂದು ಅವರು ಮೃತಪಟ್ಟಿದ್ದಾರೆ.