ಸಾಲ ಮರುಪಾವತಿ ಮಾಡದ್ದಕ್ಕೆ ಮನೆಗೆ ಬೀಗ

Published on

ಬಿಡದಿ: ಬಿಡದಿಯ ತೊರೆದೊಡ್ಡಿ ಗ್ರಾಮದಲ್ಲಿ ಅಲಮೇಲಮ್ಮ ಸಿದ್ದರಾಜು ಅವರ ಮನೆಗೆ ಫೈನಾನ್ಸ್‌ನವರು ಬೀಗ ಹಾಕಿ ಸೀಲ್ ಮಾಡಿದ್ದಾರೆ.

ಕೆಂಗೇರಿಯಲ್ಲಿರುವ ಫೈನಾನ್ಸ್‌ನಿಂದ ಲಮೇಲಮ್ಮ ಸಿದ್ದರಾಜು ಅವರ ಪುತ್ರ ಮನೆಯ ಪತ್ರಗಳನ್ನು ಅಡವಿಟ್ಟು 8 ಲಕ್ಷ ರೂ. ಸಾಲ ಪಡೆದಿದ್ದು, ಮೊದಲು ಕೆಲವು ಕಂತುಗಳನ್ನು ಕಟ್ಟಿದ್ದಾರೆ. ಆನಂತರ ಹಣ ಕಟ್ಟಿಲ್ಲ. ಕಾರಣ ಕೇಳಿ ನೋಟಿಸ್ ನೀಡಿದರೂ ಸಾಲ ಮರು ಪಾವತಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಅಂತಿಮವಾಗಿ ಮನೆ ವಶಕ್ಕೆ ಪಡೆಯಲು ತೀರ್ಪು ಬಂದ ಹಿನ್ನೆಲೆಯಲ್ಲಿ ಶನಿವಾರ ಬಿಡದಿ ಪೊಲೀಸರ ಸಹಾಯ ಪಡೆದು ಮನೆಗೆ ಬೀಗ ಹಾಕಿ ಸೀಲ್ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net