ಮನೆ ಬೆಂಕಿಗಾಹುತಿ

ಮನೆ ಬೆಂಕಿಗಾಹುತಿ
Published on

ಕೆ.ಆರ್.ಸಾಗರ: ಕೆ.ಆರ್.ಸಾಗರ ಹಿನ್ನಿರನ ಬಳಿ ಇರುವ ಮೈಸೂರು ತಾಲೂಕಿನ ಬೋರೆ ಆನಂದೂರು ಗ್ರಾಮದಲ್ಲಿ ಶನಿವಾರ ಮನೆಯೊಂದು ಬೆಂಕಿಗಾಹುತಿಯಾಗಿದೆ.

ಗ್ರಾಮದಲ್ಲಿ ಮಧ್ಯಭಾಗದಲ್ಲಿ ಶನಿವಾರೇಗೌಡ, ಶ್ರೀನಿವಾಸೇಗೌಡ ಮತ್ತು ವೆಂಕಟೇಶೇಗೌಡ ಎಂಬ ಸಹೋದರರು ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮೂವರು ಸಹೋದರರು ಜಮೀನಿಗೆ ತೆರಳಿದ್ದ ಸಂದರ್ಭ ದುರಂತ ಸಂಭವಿಸಿದೆ.

ಬೆಂಕಿ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ. ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಾಗೂ ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net