ಕಾಡಾನೆ ದಾಳಿಗೆ ಮನೆ ಜಖಂ

21skpp 3
Published on

ಸಕಲೇಶಪುರ: ತಾಲೂಕಿನ ಯಡಕುಮರಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮನೆಯೊಂದು ಜಖಂಗೊಂಡಿದೆ.


ಮಂಗಳವಾರ ಮುಂಜಾನೆ ಗ್ರಾಮದ ವೆಂಕಟೇಶ್ ಅವರ ಮನೆ ಮೇಲೆ ಕಾಡಾನೆ ದಾಳಿ ನಡೆಸಿದ್ದರಿಂದ ಮನೆಯ ಮುಂಭಾಗದ ಶೀಟ್‌ಗಳು ಸಂಪೂರ್ಣ ಹಾನಿಯಾಗಿವೆ. ಗ್ರಾಮಕ್ಕೆ ನುಗ್ಗಿದ ಕಾಡಾನೆಯನ್ನು ಗ್ರಾಮದಿಂದ ಹೊರ ಅಟ್ಟಲು ಯತ್ನಿಸಿದ ಗ್ರಾಮಸ್ಥರ ಮೇಲೂ ದಾಳಿ ನಡೆಸಲು ಮುಂದಾಗಿದ್ದು ಕೂದಲೆಳೆ ಅಂತರದಲ್ಲಿ ಕೆಲವರು ಪಾರಾಗಿದ್ದಾರೆ.


ಕಳೆದ 20 ದಿನಗಳಿಂದ ಪುಂಡಾನೆಗಳ ಗುಂಪೊಂದು ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net