ಮನೆಗೆ ಬೆಂಕಿ ತಗುಲಿ ಹಾನಿ

ಮನೆಗೆ ಬೆಂಕಿ ತಗುಲಿ ಹಾನಿ
Published on

ಹುಣಸೂರು: ನಗರದ ಕಿರಿಜಾಜಿ ರಸ್ತೆಯ ನಿವಾಸಿ ಮೊಹಮದ್ ರಹಮತ್ ಅವರ ಮನೆ ಭಾನುವಾರ ಅಗ್ನಿ ಆಕಸ್ಮಿಕದಿಂದಾಗಿ ಸುಟ್ಟುಹೋಗಿದೆ.

ಕಲ್ನಾರ್ ಶೀಟಿನ ಮನೆಯಾಗಿದ್ದು, ಮೊದಲ ಅಂತಸ್ತಿನ ಶೀಟಿನಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಬೆಂಕಿ ಮೇಲಂತಸ್ತಿನ ಮನೆಯನ್ನು ಆವರಿಸಿ ಮನೆಯಲ್ಲಿದ್ದ ಪೀಠೋಪಕರಣಗಳು ಭಸ್ಮವಾಗಿದೆ. ಸುತ್ತಮುತ್ತಲ ಜನರು ಸೇರಿ ಬೆಂಕಿ ನಂದಿಸಿದ್ದಾರೆ.

ನಗರಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net