ಮಳೆಗೆ ಕುಸಿದು ಬಿದ್ದ ಮನೆ

IMG_20250522_171014
ಅರಸೀಕೆರೆ ನಗರದ ಹಾಸನ ರಸ್ತೆ ಬಡಾವಣೆ ನಿವಾಸಿ ಲಕ್ಷ್ಮಮ್ಮ ಅವರ ಮನೆ ಮಳೆಗೆ ಕುಸಿದು ಬಿದ್ದಿದ್ದು, ಟಾರ್ಪಾಲ್ ಹಾಗೂ ಸೋಗೆ ಹೊದಿಕೆ ಹಾಕಿರುವುದು.
Published on

ಅರಸೀಕೆರೆ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ನಗರದ ಹಾಸನ ರಸ್ತೆ ಬಡಾವಣೆ ನಿವಾಸಿ ಲಕ್ಷ್ಮಮ್ಮ ಮನೆ ಬುಧವಾರ ಕುಸಿದು ಬಿದ್ದಿದೆ. ದಿಢೀರ್ ನಡೆದ ಅವಘಡದಿಂದ ಮನೆಯಲ್ಲಿದ್ದ ಬಟ್ಟೆ, ಆಹಾರ ಪದಾರ್ಥಗಳು ಮಣ್ಣುಪಾಲಾಗಿವೆ. ಮಳೆಯಿಂದ ರಕ್ಷಣೆ ಪಡೆಯಲು ಟಾರ್ಪಾಲ್ ಹೊದಿಕೆ ಹಾಕಿಕೊಂಡು ಬದುಕು ನಡೆಸುವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುದ್ದಿ ತಿಳಿದ ವಾರ್ಡ್ ನಗರಸಭೆ ಸದಸ್ಯೆ ಅಭಿರಾಮಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕ ಶಿವನ್‌ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪರಿಹಾರಕ್ಕೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net