ಮನೆಗೆ ಬೆಂಕಿ ತಗುಲಿ ಅಪಾರ ಹಾನಿ

New Project (14)
Published on

ಕಾಸರಗೋಡು: ನೆಲ್ಲಿಕಟ್ಟೆ ಸನಿಹದ ಚಂದ್ರಂಪಾರೆ ನಿವಾಸಿ ಶಾಫಿ ಎಂಬುವರ ಮನೆಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ. ಬುಧವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಅಡುಗೆ ಕೊಠಡಿಯೊಳಗಿದ್ದ ಫ್ರಿಜ್, ಗ್ರೈಂಡರ್, ವಾಶಿಂಗ್ ಮಷಿನ್, ಸ್ಟೌ ಸೇರಿದಂತೆ ಹಲವರು ಉಪಕರಣಗಳು ಹಾನಿಗೊಂಡಿವೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಮನೆಯವರು ನೀಡಿದ ಮಾಹಿತಿಯನ್ವಯ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ಶಮನಗೊಳಿಸುವ ಮೂಲಕ ಹೆಚ್ಚಿನ ದುರಂತ ತಪ್ಪಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ವಿದ್ಯುತ್ ದುರಂತಕ್ಕೆ ಕಾರಣವೆನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net