

ಪೆರ್ಲ: ಪಡ್ರೆ ಶಾಲೆಯಲ್ಲಿ ಹಿರಿಮೆ ಉತ್ಸವ ಇತ್ತೀಚೆಗೆ ನಡೆಯಿತು. ವಿದ್ಯಾರ್ಥಿಗಳ ಸ್ವರಚಿತ ಇಂಗ್ಲಿಷ್ ಕವನ ಸಂಕಲನ ಯುಪೋರಿಯಾ, 1ನೇ ತರಗತಿ ಮಕ್ಕಳ ಸಂಯುಕ್ತ ದಿನಚರಿ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಗ್ರಾಪಂ ಸದಸ್ಯ ರಾಮಚಂದ್ರ ಉದ್ಘಾಟಿಸಿದರು. ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಯೋಗೀಶ್ ಕಡಂಬಳಿತ್ತಾಯ ಅಧ್ಯಕ್ಷತೆ ವಹಿಸಿದ್ದರು. 7ನೇ ವಾರ್ಡ್ ಸದಸ್ಯ ನರಸಿಂಹ ಪೂಜಾರಿ, ಪ್ರಭಾರ ಪ್ರಾಂಶುಪಾಲೆ ಉಷಾ ಕುಮಾರಿ, ಹಿರಿಯ ಶಿಕ್ಷಕಿ ಚಂದ್ರಾವತಿ, ಎಂಪಿಟಿಎ ಸದಸ್ಯೆ ಹರ್ಷಲತಾ ಶುಭಾಶಂಸನೆಗೈದರು. ಮುಖ್ಯಶಿಕ್ಷಕ ವಾಸುದೇವ ನಾಯಕ್ ಸ್ವಾಗತಿಸಿದರು. ಶಿಕ್ಷಕ ಶೀನಪ್ಪ ವಂದಿಸಿದರು. ರಕ್ಷಕರು, ಅಧ್ಯಾಪಕ, ಸಿಬ್ಬಂದಿ ವರ್ಗ ಭಾಗವಹಿಸಿದ್ದರು.