ರಾಜ್ಯದ ಮಟ್ಟದ ಕಥೆ, ಕವನ ಸ್ಪರ್ಧೆ: ವಿಜಯವಾಣಿಯ ಮನೋಹರ ಬೊಂದಾಡೆಗೆ ಪ್ರಥಮ ಬಹುಮಾನ

Vijayavani
Published on

ಹೊಸಪೇಟೆ: ವಿಕಾಸ ಬ್ಯಾಂಕ್​ ಬೆಳ್ಳಿ ಹಬ್ಬದ ಪ್ರಯುಕ್ತ ಸಂಧ್ಯಾಕಾಲ ಮತ್ತು ವಿಕಾಸ ವಿಷಯವಾಗಿ ಆಯೋಜಿಸಿದ್ದ ರಾಜ್ಯದ ಮಟ್ಟದ ಕಥೆ ಮತ್ತು ಕವನ ಸ್ಪರ್ಧೆಗಳ ಫಲಿತಾಂಶ ಹೊರಬಿದ್ದಿದ್ದು, ವಿಜಯವಾಣಿಯ ಗಂಗಾವತಿ ಆವೃತ್ತಿಯ ಹಿರಿಯ ಉಪಸಂಪಾದಕ ಕನಕಗಿರಿ ಮನೋಹರ ಬೊಂದಾಡೆ ಪ್ರಥಮ ಬಹುಮಾನವನ್ನು ಜಯಿಸಿದ್ದಾರೆ.

ಮನೋಹರ ಬೊಂದಾಡೆ ಅವರಿಗೆ ಕತೆ ವಿಭಾಗದಲ್ಲಿ ಮೊದಲ ಬಹುಮಾನ ಒಲಿದುಬಂದಿದ್ದು, ವಿಜಯವಾಣಿ ಬಳಗದಿಂದ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಮನೋಹರ್​ ಬೊಂದಾಡೆ ನಂತರ ಮಂಗಳೂರಿನ ಡಾ. ಕೊಳ್ಚೆಪ್ಪೆ ಗೋವಿಂದ ಭಟ್​ ಅವರು ಎರಡನೇ ಬಹುಮಾನ ಪಡೆದರೆ, ಕುಂದಾಪುರದ ನರೇಂದ್ರ ಎಸ್​.ಗಂಗೊಳ್ಳಿ ಅವರು ತೃತೀಯ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಬೀದರ್​ನ ಮೇಘ ಎಸ್​. ಪಾಟೀಲ್​ ಮತ್ತು ಬೆಂಗಳೂರಿನ ಬದ್ರಿನಾಥ ಜಾಹಗೀರದಾರ ಅವರಿಗೆ ಸಮಾಧಾನಕರ ಬಹುಮಾನ ದೊರೆತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net