More

    ರಸ್ತೆ ದಾಟುವಾಗಲೇ 130 ಕಿ.ಮೀ ವೇಗದಲ್ಲಿ ಬಂದ ಕಾರು ಡಿಕ್ಕಿ: ಇಬ್ಬರು ಮಹಿಳಾ ಟೆಕ್ಕಿಗಳು ದುರ್ಮರಣ

    ಚೆನ್ನೈ: ಇಬ್ಬರು ಮಹಿಳಾ ಟೆಕ್ಕಿಗಳು ರಸ್ತೆ ದಾಟುವಾಗ ತುಂಬಾ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಚೆನ್ನೈನ ಐಟಿ ಕಾರಿಡಾರ್​ನಲ್ಲಿ ನಡೆದಿದೆ.

    ಎಸ್​. ಲಾವಣ್ಯ ಮತ್ತು ಆರ್​. ಲಕ್ಷ್ಮೀ ಮೃತ ದುರ್ದೈವಿಗಳು. ಇಬ್ಬರಿಗೂ 23 ವರ್ಷ ವಯಸ್ಸಾಗಿತ್ತು. ಚೆನ್ನೈ ಎಚ್​ಸಿಎಲ್​ ಸ್ಟೇಟ್​ ಸ್ಟ್ರೀಟ್​ ಸರ್ವೀಸ್​ ಸಂಸ್ಥೆಯಲ್ಲಿ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಕೆಲಸ ಮುಗಿಸಿ ಬುಧವಾರ ರಾತ್ರಿ 11.30ಕ್ಕೆ ಮನೆಗೆ ಹಿಂದಿರುತ್ತಿದ್ದರು. ಈ ವೇಳೆ ರಸ್ತೆ ದಾಟುವಾಗಲೇ ಹೋಂಡಾ ಸಿಟಿ ಕಾರು ಡಿಕ್ಕಿ ಹೊಡೆದಿದ್ದು, ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಕಾರು ಚಾಲಕ 20 ವರ್ಷದ ಮೊತೀಶ್​ ಕುಮಾರ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೇಪರ್​ ಪ್ಲೇಟ್ಸ್​ಗಳನ್ನು ತಯಾರು ಮಾಡುವ ತನ್ನ ತಂದೆಯೊಂದಿಗೆ ಮೊತೀಶ್​ ಕೆಲಸ ಮಾಡುತ್ತಿದ್ದನು. ಗಂಟೆಗೆ ಸುಮಾರು 130 ಕಿ.ಮೀ ವೇಗದಲ್ಲಿ ಮೊತೀಶ್ ಕಾರು ಚಲಾಯಿಸುತ್ತಿದ್ದ ಎಂದು ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ. ​

    ಲಾವಣ್ಯ ಆಂಧ್ರಪ್ರದೇಶದ ಚಿತ್ತೂರಿನವರು ಮತ್ತು ಲಕ್ಷ್ಮಿ ಕೇರಳದ ಪಲಕ್ಕಾಡ್‌ನವರು. ಐಟಿ ಕಾರಿಡಾರ್ ಟೋಲ್ ರಸ್ತೆಯ ಅಕ್ಕಪಕ್ಕದಲ್ಲೇ ಟೆಕ್ ಕಂಪನಿಗಳು ಮತ್ತು ಬೃಹತ್ ವಸತಿ ಸಮುಚ್ಚಯವಿದೆ. ರಸ್ತೆಯಲ್ಲಿ ಸಾಕಷ್ಟು ಜೀಬ್ರಾ ಕ್ರಾಸಿಂಗ್‌ಗಳ ಕೊರತೆಯಿದೆ ಎಂದು ಹಲವರು ಅರೋಪಿಸಿದ್ದಾರೆ. ಪಾದಚಾರಿಗಳು ಟ್ರಾಫಿಕ್ ಮಧ್ಯೆಯೂ ಅಪಾಯಗಳನ್ನು ಲೆಕ್ಕಿಸದೇ ರಸ್ತೆಗಳನ್ನು ದಾಟುತ್ತಿರುವುದಾಗಿ ತಿಳಿದುಬಂದಿದೆ.

    ಹೆದ್ದಾರಿ ಇಲಾಖೆಯು ಸುರಕ್ಷತೆ ಬಗ್ಗೆ ನಿರಾಸಕ್ತಿ ಹೊಂದಿದೆ. ಒಂದು ಅವರು ಸಿಗ್ನಲ್ ಸುರಕ್ಷತೆಯೊಂದಿಗೆ ಜೀಬ್ರಾ ಕ್ರಾಸಿಂಗ್‌ಗಳನ್ನು ಒದಗಿಸಬೇಕು ಅಥವಾ ಪಾದಚಾರಿಗಳಿಗೆ ಓವರ್‌ಹೆಡ್ ಬ್ರಿಡ್ಜ್‌ಗಳನ್ನು ನಿರ್ಮಿಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

    ಬರೀ ಇಬ್ಬರಲ್ಲ, ಇನ್ನೂ ನಾಲ್ವರಿದ್ದಾರೆ!; ತಿಹಾರ್ ಜೈಲ್​ನಲ್ಲೇ ನಟಿಯರ ಜತೆ ಮೀಟಿಂಗ್

    ನಿತ್ಯವು ತಪ್ಪದೇ 9 ಗಂಟೆಗೆ ಸರಿಯಾಗಿ ಶಾಲೆಗೆ ಹಾಜರ್​! ಈ ಕೋತಿಯ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

    ಗೂಂಡಾಗಳ ಮೇಲೆ ಹದ್ದಿನ ಕಣ್ಣು: ಹೆಚ್ಚು ಕ್ರಿಮಿನಲ್ ಕೇಸ್ ಇರೋರ ಮೇಲೆ ನಿಗಾ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts