ಬಿಜೆಪಿ ಹಗರಣ ಮುಂದೆ ನಮ್ದು ಲೆಕ್ಕಕ್ಕಲ್ಲ

Press meet
ಸಚಿವ ರಾಮಲಿಂಗ ರೆಡ್ಡಿ
Published on

ಹೊಸಪೇಟೆ: ನಮ್ಮ ಸರ್ಕಾರದಲ್ಲಿ ವಾಲ್ಮೀಕಿ ನಿಗಮ ಹಾಗೂ ಮೂಡ ಸೈಟ್ ವಿಚಾರದ ಹಗರಣ ಎಂದು ಆರೋಪಿಸಲಾಗುತ್ತಿದೆ. ತನಿಖೆ ನಡೆಯುತ್ತಿದ್ದು ತಪ್ಪಿದಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.

ಇದನ್ನು ಓದಿ: ಲೋಕಾಯುಕ್ತ ಬಲೆಗೆ ಸಾರಿಗೆ ಸಂಸ್ಥೆ ಅಧಿಕಾರಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಕಾಲದಲ್ಲಿ ಎಷ್ಟು ಹಗರಣಗಳು ಇದ್ದವು? ಶೇ.40 ಸರ್ಕಾರ, ಎಸ್‌ಐ ನೇಮಕಾತಿ ಹಗರಣ ಸೇರಿದಂತೆ ಬಹುತೇಕ ನೇಮಕಾತಿಗಳಲ್ಲಿಯೂ ಅವರ ಹಗರಣ ಇದೆ. ಬಿಜೆಪಿಯವರ ಹಗರಣಗಳು ಕಂಪೇರ್ ಮಾಡಿದರೆ, ನಮ್ಮ ಸರ್ಕಾರದ ಹಗರಣಗಳು ಯಾವ ಲೆಕ್ಕಕ್ಕೂ ಅಲ್ಲ ಎಂದರು.

ಹಗರಣಗಳ ತನಿಖೆ ನಡೆಯುತ್ತಿದೆ. ತಪ್ಪಿದಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಸಿಎಂ ಅವರ ಪತ್ನಿ ಹೆಸರಿನಲ್ಲಿ ಮೂಡ ಸೈಟ್ ಯಾರ ಕಾಲದಲ್ಲಿ ಹಂಚಿಕೆಯಾಗಿದ್ದು? ಅಂದು ಅವರದೇ ಸರ್ಕಾರ, ಅವರದ್ದೇ ಆಯುಕ್ತ, ಅವರದ್ದೇ ಅಧ್ಯಕ್ಷರು, ಅವರದ್ದೇ ಮಂತ್ರಿಮಂಡಲ ಇತ್ತು. ಕಾನೂನು ಚೌಕಟ್ಟನ್ನು ಬಿಟ್ಟು ಕೊಟ್ಟಿದರೆ ಅದು ಅವರದೇ ತಪ್ಪು. ವಾಲ್ಮೀಕಿ ನಿಗಮದ ಹಗರಣದ ಆಡಿಯೋ ನಾನು ಕೇಳಿಲ್ಲ. ತನಿಖೆ ಆಗುತ್ತಿರುವ ವೇಳೆ ಮಾತನಾಡುವುದು ಸೂಕ್ತವಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net