ಹಾಸ್ಮಟ್ ಆಸ್ಪತ್ರೆಯಲ್ಲಿ ಸಂಸ್ಥಾಪಕರ ದಿನ ಆಚರಣೆ - ಡಾ. ಥಾಮಸ್ ಚಾಂಡಿ ಪ್ರತಿಮೆ ಅನಾವರಣ

Hosmat Hospital
Published on

ಬೆಂಗಳೂರು: ನಗರದ ಹಾಸ್ಮಟ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಂಸ್ಥಾಪಕ ಡಾ. ಥಾಮಸ್ ಚಾಂಡಿ ಗೌರವಾರ್ಥ ಅವರ ಪ್ರತಿಮೆ ಅನಾವರಣಗೊಳಿಸಿದೆ.

ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಥಾಮಸ್ ಚಾಂಡಿ ಅವರ ಸೇವೆ ಮತ್ತು ಕೊಡುಗೆಯನ್ನು ಸ್ಮರಿಸಲಾಯಿತು. ಜತೆಗೆ ಆಸ್ಪತ್ರೆಯ 4ನೇ ಮಹಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಹೊರ ರೋಗಿಗಳ ವಿಭಾಗ (ಒಪಿಡಿ) ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಡಯಾಸಿಸ್‌ನ ಆರ್ಚ್‌ಬಿಷಪ್ ರೆವರೆಂಡ್ ಡಾ. ಪೀಟರ್ ಮಚಾದೋ, ಶಾಸಕ ಎನ್.ಎ. ಹ್ಯಾರಿಸ್ ಮತ್ತು ಒಲಿಂಪಿಯನ್ ಹಾಗೂ ಅರ್ಜುನ ಪ್ರಶಸ್ತಿ ವಿಜೇತೆ ನಿಶಾ ಮಿಲೆಟ್ ಭಾಗವಹಿಸಿದ್ದರು. ಇದೇ ವೇಳೆ ಆಸ್ಪತ್ರೆಯ ಮೇಕ್ ಮಿ ವಾಕ್ ಯೋಜನೆ ಮೂಲಕ ಯುವಜನರ ಬದುಕು ಬದಲಿಸುವ ಕಾರ್ಯಗಳನ್ನು ಮುಂದುವರಿಸುವುದಾಗಿ ೋಷಿಸಲಾಯಿತು. ನಿಮ್ಮ ಜೀವನ ಮುಖ್ಯ ಎಂಬ ಹಾಸ್ಮಾಟ್‌ನ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ಈ ವರ್ಷ ದೈಹಿಕ ದೋಷಗಳಿಂದ ಬಳಲುತ್ತಿರುವ ಸವಲತ್ತು-ವಂಚಿತ 10 ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ.

ಕಾರ್ಯಕ್ರಮದಲ್ಲಿ ಹಾಸ್ಮಟ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಅನೀಶಾ ಚಾಂಡಿ ಎಕಾರ್ಟ್, ಡಾ. ಅಜೀತ್ ಬೆನಡಿಕ್ಟ್  ಹಾಜರಿದ್ದರು.

ಕೋಟ್ . . .

ಸಮಾಜ ಸೇವೆಗಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದ ಡಾ. ಥಾಮಸ್ ಚಾಂಡಿ ಸದಾ ಸ್ಮರಣೀಯರು. ಅವರೊಬ್ಬ ಅದ್ಭುತ ಆರ್ಥೋಪೆಡಿಕ್ ಸರ್ಜನ್ ಆಗಿದ್ದರು. ದೂರದರ್ಶಿ ನಾಯಕ ಹಾಗೂ ಮಾನವತಾವಾದಿಯಾಗಿದ್ದರು. ಅವರ ನಿಲುವು ಅವರ ಮಕ್ಕಳು ಹಾಗೂ ಸಂಸ್ಥೆಯ ವೈದ್ಯರು ಮತ್ತು ಹಾಸ್ಮಟ್ ಆಸ್ಪತ್ರೆಯ ಮೂಲಕ ಜೀವಂತವಾಗಿರಲಿದೆ.

ರೆವರೆಂಡ್ ಡಾ. ಪೀಟರ್ ಮಚಾಡೊ, ಬೆಂಗಳೂರು ಆರ್ಚ್‌ಬಿಷಪ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net