

ಹೊಸದುರ್ಗ: ಪಟ್ಟಣದಲ್ಲಿ ಬೈಕ್ ಕಳ್ಳನನ್ನು ಬಂಧಿಸಿರುವ ಹೊಸದುರ್ಗ ಪೊಲೀಸರು ಮೂರು ಬೈಕ್‌ಗಳನ್ನು ವಶಪಡಿಸಿಕೊಡಿದ್ದಾರೆ.
ಪಟ್ಟಣದ ಕಲ್ಲೇಶ್ವರ ಬಡಾವಣೆಯ ನಿವಾಸಿ ಸುದರ್ಶನ ಬಂಧಿತ ಆರೋಪಿ. ಕೆಎಸ್‌ಆರ್‌ಟಿ ಬಸ್ ನಿಲ್ದಾಣ ಹಾಗೂ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ನಿಲ್ಲಿಸಿದ್ದ ಬೈಕ್‌ಗಳನ್ನು ಕಳ್ಳತನ ಮಾಡಿ ಕಡಿಮೆ ಹಣಕ್ಕೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಪಟ್ಟಣದಲ್ಲಿ ಈಚೆಗೆ ಹೆಚ್ಚಾಗಿದ್ದ ಬೈಕ್ ಕಳ್ಳತನ ಪ್ರಕರಣಗಳ ಬೆನ್ನತ್ತಿದ ಹೊಸದುರ್ಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸಿ.ಸಿ ಟಿವಿ ದೃಶ್ಯ, ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಿ ಕಳ್ಳನನ್ನು ಬಂಧಿಸುವಲ್ಲಿ ಯಶಶ್ವಿಯಾಗಿದ್ದಾರೆ.
ವಿವಿಧ ಬಡಾವಣೆಗಳಲ್ಲಿ ಕಳ್ಳತನವಾಗಿದ್ದ ಬೈಕ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಿಐ ತಿಮ್ಮಣ್ಣ, ಪಿಎಸ್‌ಐ ಮಹೇಶ ಕುಮಾರ್, ಕುಮಾರ್, ಜಯರಾಜ್, ಗಂಗಾಧರ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.