ಕುದುರೆ ಏರಿ ಬಂದ…. !

Horse_Doctor
Published on

ತುಮಕೂರು: ಕುದುರೆ ಏರಿ ಮತಗಟ್ಟೆಗಳಿಗೆ ಭೇಟಿ ನೀಡಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿಯನ್ನು ತಿಪಟೂರಿನ ಹೆಸರಾಂತ ವೈದ್ಯ ಡಾ.ಶ್ರೀಧರ್ ಮೂಡಿಸಿದರು.

ಯಾವುದೇ ಕಾರ್ಯಕ್ರಮವಾದರೂ ವಿಭಿನ್ನತೆ ಮೆರೆಯುವ ವೈದ್ಯ ಡಾ. ಜಿ.ಎಸ್ ಶ್ರೀಧರ್ ಕುದುರೆ ಏರಿ ತಿಪಟೂರು ನಗರದ ಮತಕೇಂದ್ರಗಳಿಗೆ ಭೇಟಿ ನೀಡಿ, ಅಮೂಲ್ಯ ಮತದಾನದ ಬಗ್ಗೆ ಅರಿವು ಮೂಡಿಸಿದರು. ಇದರ ಜತೆಗೆ, ಮತದಾನ ಮಾಡಿ ಬಂದು ಶಾಹಿ ತೋರಿಸಿದವರನ್ನು ತಮ್ಮ ಹೋಟೆಲಿಗೆ ಬಂದು ಟೀ ಮತ್ತು ಸಮೋಸಾ ಸವಿಯುವಂತೆ ಆತ್ಮೀಯ ಆಮಂತ್ರಣ ನೀಡಿದರು. ಮತಕ್ಕೆ ಬೇರೆ ಬೇರೆ ಆಮಿಷವೊಡ್ಡುವುದರ ನಡುವೆ ಮತದಾನ ಪ್ರಮಾಣ ಹೆಚ್ಚಳಕೆಕ ಈ ರೀತಿ ವಿಶೇಷ ಆಮಂತ್ರಣ ನೀಡಿದ್ದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net