ಉನ್ನತ ಚಿಕಿತ್ಸೆಗೆ ನೆರವಿನ ನಿರೀಕ್ಷೆ!

New Project (16)
Published on

ಬಂಟ್ವಾಳ: ಕಳೆದ ವರ್ಷ ಅಪಘಾತಗೊಂಡು ಎದ್ದೇಳಲಾಗದ ಸ್ಥಿತಿಯಲ್ಲಿರುವ ತಾಲೂಕಿನ ಲೊರೆಟ್ಟೋಪದವು ಆಚಾರಿಪಲ್ಕೆ ನಿವಾಸಿ ಕೃಷ್ಣ ಆಚಾರಿ ಅವರಿಗೆ ಉನ್ನತ ಚಿಕಿತ್ಸೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ದಾನಿಗಳ ಮೊರೆ ಹೋಗಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ಕೃಷ್ಣ ಅವರು 2024ರ ಆಗಸ್ಟ್‌ನಲ್ಲಿ ಕೊಣಾಜೆ ಬಳಿ ಸಂಚರಿಸುತ್ತಿದ್ದಾಗ ಎದುರಿನಿಂದ ವೇಗವಾಗಿ ಆಗಮಿಸಿದ್ದ ಬೈಕೊಂದು ಡಿಕ್ಕಿಯಾಗಿತ್ತು. ಗಂಭೀರ ಗಾಯಗೊಂಡಿದ್ದ ಅವರನ್ನು ದೇರಳಕಟ್ಟೆ ು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ದುಬಾರಿಯಗಿದ್ದರಿಂದ ವೆನ್ಲಾಕ್‌ಗೆ ಸ್ಥಳಾಂತರಿಸಲಾಯಿತು. ವೈದ್ಯರ ನಿರ್ಲಕ್ಷೃದಿಂದಾಗಿ ಪ್ರಸ್ತುತ ಕೃಷ್ಣ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು, ಫಿಸಿಯೋಥೆರಪಿ ಚಿಕಿತ್ಸೆಗಾಗಿ ದಾನಿಗಳಿಂದ ನೆರವು ನಿರೀಕ್ಷಿಸಿದ್ದಾರೆ. ಲೊರೆಟ್ಟೋಪದವಿನ ಪೌಲ್ ಡಿಸೋಜ, ಉದ್ಯಮಿ ಪ್ರಕಾಶ್ ವಾಝ್, ಸೇವ್‌ಲೈಫ್ ಟ್ರಸ್ಟ್, ಯೂತ್ಸ್ ಆಫ್ ವಿಶ್ವಕರ್ಮ ಸಂಘದಿಂದ ಈಗಾಗಲೇ ನೆರವು ನೀಡಲಾಗಿದ್ದು, ಹೆಚ್ಚಿನ ಮೊತ್ತ ಅಗತ್ಯವಿದೆ. ನೆರವು ನೀಡುವವರು ಕೃಷ್ಣ, ಯೂನಿಯನ್ ಬ್ಯಾಂಕ್, ಖಾತೆ ಸಂಖ್ಯೆ 520101256823698, ಐಎಫೆಸ್ಸಿ ಕೋಡ್: ಯುಬಿಐಎನ್0902047 ಜಮಾ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net