ಇಬ್ಬರು ಸಾಧಕರಿಗೆ ಸನ್ಮಾನ

ಇಬ್ಬರು ಸಾಧಕರಿಗೆ ಸನ್ಮಾನ
Published on

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ಕೋಟೂರು ಗ್ರಾಮದ ಶ್ರೀ ಮಹಾದೇವರ ದೇವಸ್ಥಾನ ಆಡಳಿತ ಮಂಡಳಿಯಿಂದ ಗ್ರಾಮದ ಇಬ್ಬರು ಸಾಧಕರನ್ನು ಸನ್ಮಾನಿಸಲಾಯಿತು.

ಗ್ರಾಮದ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಭಾಜನರಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಎರಡನೆ ಹೆಚ್ಚು ಅಂಕ ಪಡೆದ ಲಯನ್ಸ್ ಶಾಲೆ ವಿದ್ಯಾರ್ಥಿನಿ ಭಾಷಿತಾ ದೇವಯ್ಯ ಅವರನ್ನು ಸನ್ಮಾನಿಸಲಾಯಿತು.

ಭಾಷಿತಾ ದೇವಯ್ಯ ಗ್ರಾಮದ ಕಾಟಿಮಾಡ ವಿನ್ಸಿ ದೇವಯ್ಯ ಹಾಗೂ ರೀನಾ ಕಾವೇರಮ್ಮ ಅವರ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net