

ಕಾಸರಗೋಡು : ಕಾಸರಗೋಡಿನ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಕನ್ನಡ ಭವನ ಪ್ರಕಾಶನದ ರೂವಾರಿ ವಾಮನ್ ರಾವ್ ಬೇಕಲ್ ಅವರಿಗೆ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಕನ್ನಡ ಭವನ ಗ್ರಂಥಾಲಯದಲ್ಲಿ 2 ಸಾವಿರಕ್ಕೂ ಹೆಚ್ಚು ಪುಸ್ತಕಗಳಿದ್ದು, ಕನ್ನಡ ಭವನ ಸಾರ್ವಜನಿಕ ವಾಚನಾಲಯವಾಗಿದೆ. ಯಾವುದೇ ಸಂಘ-ಸಂಸ್ಥೆ, ಸರ್ಕಾರದ ಅನುದಾನ ಪಡೆಯದೆ , ಕಳೆದ ಎರಡು ದಶಕಗಳಿಂದ ಕನ್ನಡಪರಸೇವೆ, ಸಾಮಾಜಿಕ ಮತ್ತು ಧಾರ್ಮಿಕ ಸೇವೆಯನ್ನು ಪತ್ನಿ ಸಂಧ್ಯಾರಾಣಿ ಟೀಚರ್, ಪುತ್ರರಾದ ಸನತ್ ಕುಮಾರ್, ಕಾರ್ತಿಕ್ ಕಾಸರಗೋಡು ಸಹಕಾರದಲ್ಲಿ ನಡೆಸಿಕೊಂಡು ಬಂದಿದ್ದಾರೆ.
ಜಿಲ್ಲೆಗೆ ಆಗಮಿಸುವ ಹೊರನಾಡಿನ ಕನ್ನಡ ಸಾಹಿತಿಗಳು, ಸಾಂಸ್ಕೃತಿಕ ಯಾತ್ರಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಒದಗಿಸುವ ಮೂಲಕ ವಾಮನ್‌ರಾವ್ ಬೇಕಲ್ ಅವರು ಕನ್ನಡದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಜನಪರ ಹಾಗೂ ಅಪೂರ್ವ ಸಾಧನೆ ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಲಾಗಿದೆ.